ಸ್ವಂತ ಬ್ಯುಸಿನೆಸ್ ಶುರು ಮಾಡಬೇಕೆಂದು ಅನೇಕರು ಕನಸು ಕಾಣುತ್ತಾರೆ. ಆದ್ರೆ ಆರ್ಥಿಕ ಸಮಸ್ಯೆಯಿಂದಾಗಿ ಬ್ಯುಸಿನೆಸ್ ಆಸೆ ಕೈಬಿಡ್ತಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಅನೇಕ ಬ್ಯುಸಿನೆಸ್ ಇದೆ. ಅದ್ರಲ್ಲಿ ಬೋನ್ಸಾಯ್ ಸಸ್ಯದ ಬ್ಯುಸಿನೆಸ್ ಕೂಡ ಒಂದು.
ಬೋನ್ಸಾಯ್ ಸಸ್ಯ ಅದೃಷ್ಟವೆಂದು ಪರಿಗಣಿಸಲಾಗಿದೆ. ಹಾಗಾಗಿ ಮನೆ, ಕಚೇರಿ ಸೇರಿದಂತೆ ಎಲ್ಲ ಕಡೆ ಈ ಗಿಡವನ್ನು ಜನರು ಇಡುತ್ತಾರೆ. ಅಲಂಕಾರಿಕವಾಗಿಯೂ ಇದನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಈ ಗಿಡಗಳ ಬೆಲೆ 200 ರೂಪಾಯಿಯಿಂದ ಸುಮಾರು 2500 ರೂಪಾಯಿಯಿದೆ. ಇದ್ರ ಮೂಲಕ ನೀವು ಉತ್ತಮ ಸಂಪಾದನೆ ಮಾಡಬಹುದು. ಸರ್ಕಾರ ಇದಕ್ಕೆ ಆರ್ಥಿಕ ನೆರವು ನೀಡುತ್ತದೆ.
ಕಡಿಮೆ ಬಂಡವಾಳದೊಂದಿಗೆ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಒಂದೇ ಬಾರಿ ನಿಮಗೆ ಲಾಭ ಸಿಗುವುದಿಲ್ಲ. ಬೋನ್ಸಾಯ್ ಗಿಡ ಸಿದ್ಧವಾಗಲು ಕನಿಷ್ಠ ಎರಡರಿಂದ ಐದು ವರ್ಷ ಬೇಕು. ಮನೆಯಲ್ಲಿಯೇ ಸಸಿ ಬೆಳೆಸಿ ವ್ಯಾಪಾರ ಮಾಡಲು ಬಯಸುವವರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಇನ್ನೊಂದು ರೀತಿಯಲ್ಲಿ ರಿಟೇಲರ್ ತರ ಕೆಲಸ ಮಾಡಬಹುದು. ನರ್ಸರಿಯಿಂದ ಸಿದ್ಧವಾದ ಗಿಡಗಳನ್ನು ತಂದು ಶೇಕಡಾ 30ರಿಂದ 50ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು.
ಈ ವ್ಯವಹಾರವನ್ನು ಪ್ರಾರಂಭಿಸಲು ಶುದ್ಧ ನೀರು, ಮರಳು ಮಣ್ಣು ಅಥವಾ ಮರಳು, ಮಡಕೆಗಳು ಮತ್ತು ಗಾಜಿನ ಮಡಕೆಗಳು, ನೆಲ ಅಥವಾ ಮೇಲ್ಛಾವಣಿ, ಗಾಜಿನ ಮಾತ್ರೆಗಳು, ತೆಳುವಾದ ತಂತಿ, ಗಿಡಗಳ ಮೇಲೆ ನೀರನ್ನು ಚಿಮುಕಿಸಲು ಸ್ಪ್ರೇ ಬಾಟಲ್ ಅಗತ್ಯವಿದೆ.
ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರೆ, ಸುಮಾರು 5 ಸಾವಿರ ರೂಪಾಯಿಗಳ ಹೂಡಿಕೆ ಮಾಡಬೇಕಾಗುತ್ತದೆ. ಬೋನ್ಸಾಯ್ ಗಿಡದ ಬೇಸಾಯಕ್ಕೆ ಮೂರು ವರ್ಷಗಳಲ್ಲಿ ಸರಾಸರಿ 240 ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ ಪ್ರತಿ ಗಿಡಕ್ಕೆ 120 ರೂಪಾಯಿಯನ್ನು ಸರ್ಕಾರ ನೀಡಲಿದೆ. ಒಂದು ಹೆಕ್ಟೇರ್‌ನಲ್ಲಿ 1500 ರಿಂದ 2500 ಸಸ್ಯಗಳನ್ನು ನೆಡಬಹುದು. ಎರಡು ಗಿಡಗಳ ಮಧ್ಯೆ ಉಳಿದಿರುವ ಜಾಗದಲ್ಲಿ ಬೇರೊಂದು ಬೆಳೆ ಬೆಳೆಯಬಹುದು. ನಾಲ್ಕು ವರ್ಷದಲ್ಲಿ 3.5 ರಿಂದ 4 ಲಕ್ಷ ರೂಪಾಯಿವರೆಗೆ ನೀವು ಗಳಿಕೆ ಶುರು ಮಾಡಬಹುದು.