ಇದು ಡಿಜಿಟಲ್ ಯುಗ. ಜನರು ಡಿಜಿಟಲ್ ವಹಿವಾಟನ್ನು ಹೆಚ್ಚಾಗಿ ಮಾಡ್ತಿದ್ದಾರೆ. ಗೂಗಲ್ ಪೇ, ಫೋನ್ ಪೇ ಸೇರಿದಂತೆ ಅನೇಕ ಡಿಜಿಟಲ್ ಮಾಧ್ಯಮದ ಮೂಲಕ ಹಣ ವರ್ಗಾವಣೆ ಸೇರಿದಂತೆ ಹಣಕಾಸಿನ ವಹಿವಾಟು ನಡೆಸುತ್ತಾರೆ.
ಅಂಗಡಿ ಶಾಪಿಂಗ್, ಫೋನ್ ಬಿಲ್, ಕರೆಂಟ್ ಬಿಲ್ ಸೇರಿದಂತೆ ಅನೇಕ ವಹಿವಾಟು ಮೊಬೈಲ್ ನಲ್ಲಿಯೇ ನಡೆಯುತ್ತದೆ. ಅನೇಕರಿಗೆ ಈ ವಹಿವಾಟಿನ ವೇಳೆ ಸಮಸ್ಯೆಯಾಗುತ್ತದೆ. ಹಣ, ಮಧ್ಯದಲ್ಲಿ ಸಿಕ್ಕಿಬೀಳುವ ಸಾಧ್ಯತೆಯಿರುತ್ತದೆ. ಅಂತವರಿಗೆ ಸಹಾಯದ ಅವಶ್ಯಕತೆಯಿರುತ್ತದೆ. ಗ್ರಾಹಕರಿಗೆ ನೆರವಾಗುವ ಮೂಲಕ ನೀವು ಹಣ ಗಳಿಸಬಹುದು. ತಿಂಗಳಿಗೆ ಕನಿಷ್ಠ 23,000 ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು.
ಫೋನ್ ಪೇ ನಿಮಗೆ ಗಳಿಕೆಗೆ ಅವಕಾಶ ನೀಡ್ತಿದೆ. ಮನೆಯಲ್ಲೇ ಕುಳಿತು ಈ ಕೆಲಸ ಮಾಡಬಹುದು. 12ನೇ ತರಗತಿ ಪಾಸ್ ಆದ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಇದಕ್ಕೆ ಅನುಭವದ ಅಗತ್ಯವಿಲ್ಲ. ಚೆನ್ನಾಗಿ ಮಾತನಾಡಲು ಬರಬೇಕು. ಗ್ರಾಹಕರ ಸಮಸ್ಯೆಗೆ ಸ್ಪಂದಿಸಬೇಕು. ಮೊಬೈಲ್ ಮತ್ತು ಕಂಪ್ಯೂಟರ್ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರಬೇಕು.
ಆಸಕ್ತರು ಮೊದಲು Able ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು.ಈ ಅಪ್ಲಿಕೇಶನ್ ನಿಮಗೆ ತರಬೇತಿ ನೀಡುತ್ತದೆ. ಸ್ಟಡಿ ಮೆಟೀರಿಯಲ್ ಕೂಡ ನೀಡುತ್ತದೆ. ನಂತ್ರ ಪರೀಕ್ಷೆಯಿರುತ್ತದೆ. ಪಾಸ್ ಆದವರ ರೆಸ್ಯೂಮ್ ಫೋನ್ ಪೇಗೆ ಕಳುಹಿಸುತ್ತದೆ. ಅಲ್ಲಿ ಸಂದರ್ಶನ ನೀಡಬೇಕು. ಪಾಸ್ ಆದ್ರೆ ಫೋನ್ ಪೇ ಕೆಲಸ ನೀಡುತ್ತದೆ. ಪಾಸ್ ಆಗದೆ ಹೋದ್ರೆ Able App ಮತ್ತೊಂದು ಕಂಪನಿಯಲ್ಲಿ ನಿಮಗೆ ಕೆಲಸ ನೀಡುತ್ತದೆ.