ಐಪಿಒ ಮೂಲಕ ಹಣ ಗಳಿಸಲು ಬಯಸಿದ್ದರೆ ಇಲ್ಲೊಂದು ಅವಕಾಶವಿದೆ. ಯೂನಿಕಾರ್ನ್ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಹಣ ಸಂಪಾದಿಸಬಹುದು. ಬ್ಯೂಟಿ ಸ್ಟಾರ್ಟಪ್ ನೈಕಾ, ಐಪಿಒ ಈ ತಿಂಗಳು ಆರಂಭವಾಗಲಿದೆ.
ಮಾಧ್ಯಮ ವರದಿಗಳ ಪ್ರಕಾರ, ನೈಕಾ, ಐಪಿಒ ಅಕ್ಟೋಬರ್ 28 ರಂದು ಆರಂಭವಾಗಲಿದೆ. ನವೆಂಬರ್ 1 ರಂದು ಮುಚ್ಚಲಿದೆ. ಐಪಿಒಗಾಗಿ ಈ ಆನ್ಲೈನ್ ಸ್ಟೋರ್ ತನ್ನ ಮೌಲ್ಯಮಾಪನವನ್ನು 7.4 ಬಿಲಿಯನ್ ಡಾಲರ್ ಇರಿಸಿಕೊಳ್ಳಲು ನಿರ್ಧರಿಸಿದೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆಗೆ ವಿರೋಧ; ಕಾತ್ಯಾಯಿನಿ ಪೂಜೆ ರದ್ದು
ಆಫರ್ ಫಾರ್ ಸೇಲ್ ಮೂಲಕ ಷೇರುದಾರರು 41,972,660 ಷೇರುಗಳನ್ನು ಮಾರಾಟ ಮಾಡಲಿದ್ದಾರೆ. ಸೆಬಿ, ಅಕ್ಟೋಬರ್ 14ರಂದು ನೈಕಾ ಐಪಿಒಗೆ ಅನುಮೋದನೆ ನೀಡಿದೆ.
ನೈಕಾವನ್ನು 2012 ರಲ್ಲಿ ಮಾಜಿ ಹೂಡಿಕೆ ಬ್ಯಾಂಕರ್ ಫಲ್ಗುಣಿ ನಾಯರ್ ಸ್ಥಾಪಿಸಿದರು. ಕಂಪನಿಯು ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಆನ್‌ಲೈನ್ ಮಾರಾಟದ ಹೊರತಾಗಿ, ಕಂಪನಿಯು ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕವೂ ವಸ್ತುಗಳ ಮಾರಾಟ ಮಾಡುತ್ತದೆ.
ನೈಕಾ, 15,000 ಕ್ಕೂ ಹೆಚ್ಚು ಬ್ರಾಂಡ್‌ಗಳನ್ನು ಒಳಗೊಂಡಿದೆ. ಕಂಪನಿಯು ದೇಶದಾದ್ಯಂತ 68 ಮಳಿಗೆಗಳನ್ನು ಹೊಂದಿದೆ. 2022 ರ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯವು 1,860 ಕೋಟಿ ರೂಪಾಯಿಯಾಗಿದೆ.