ಇತ್ತೀಚಿನ ದಿನಗಳಲ್ಲಿ ಜನರು ಕೆಲಸ ಬಿಟ್ಟು ಬ್ಯುಸಿನೆಸ್ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ತಿಂಗಳಿಗೆ ಹೆಚ್ಚು ಗಳಿಸುವಂತಹ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ಮಾಡ್ತಿದ್ದರೆ ಆನ್ಲೈನ್ ಯುಗದಲ್ಲಿ ನೀವು ರಟ್ಟಿನ ಬ್ಯುಸಿನೆಸ್ ಶುರು ಮಾಡಬಹುದು.
ಪ್ಯಾಕೇಜಿಂಗ್ ಗೆ ಅಗತ್ಯವಾಗಿರುವ ರಟ್ಟಿನ ಬ್ಯುಸಿನೆಸ್ ಗೆ ಹೆಚ್ಚು ಬೇಡಿಕೆಯಿದೆ. ಇದಕ್ಕೆ ಋತುವಿನ ಅಗತ್ಯವಿಲ್ಲ. ಎಲ್ಲ ಋತುವಿನಲ್ಲೂ ಬೇಡಿಕೆಯಿರುವ ಈ ಬ್ಯುಸಿನೆಸ್ ನಿಂದ ತಿಂಗಳಿಗೆ 5-10 ಲಕ್ಷದವರೆಗೆ ಗಳಿಸಬಹುದು.
ಈ ವ್ಯವಹಾರವನ್ನು ಪ್ರಾರಂಭಿಸಲು ಕ್ರಾಫ್ಟ್ ಪೇಪರ್ ಅಗತ್ಯ. ಕೆಜಿಗೆ ಸುಮಾರು 40 ರೂಪಾಯಿಗೆ ಮಾರುಕಟ್ಟೆಯಲ್ಲಿ ಇದನ್ನು ಖರೀದಿ ಮಾಡಬಹುದು. ಕ್ರಾಫ್ಟ್ ಪೇಪರ್ ಉತ್ತಮವಾಗಿದ್ದರೆ ರಟ್ಟಿನ ಪೆಟ್ಟಿಗೆಯ ಗುಣಮಟ್ಟ ಉತ್ತಮವಾಗಿರುತ್ತದೆ.
ಇದನ್ನು ಶುರು ಮಾಡಲು ಸುಮಾರು 5000 ಚದರ ಅಡಿ ಜಾಗ ಬೇಕಾಗುತ್ತದೆ. ಜನನಿಬಿಡ ಪ್ರದೇಶದಲ್ಲಿ ಇದನ್ನು ಶುರು ಮಾಡಬೇಡಿ. ರಟ್ಟಿನ ಪೆಟ್ಟಿಗೆ ಸಾಗಿಸಲು ನಿಮಗೆ ಜಾಗ ಬೇಕಾಗುತ್ತದೆ. ಇದ್ರಲ್ಲಿ ಎರಡು ರೀತಿಯ ಯಂತ್ರ ಬರುತ್ತದೆ. ಅರೆ ಸ್ವಯಂಚಾಲಿತ ಯಂತ್ರ ಮತ್ತು ಎರಡನೆಯದು ಸಂಪೂರ್ಣ ಸ್ವಯಂಚಾಲಿತ ಯಂತ್ರ. ಸಣ್ಣ ಪ್ರಮಾಣದಲ್ಲಿ ಈ ಬ್ಯುಸಿನೆಸ್ ಶುರು ಮಾಡಿದ್ರೂ ನಿಮಗೆ ಹೂಡಿಕೆ ಹೆಚ್ಚಾಗುತ್ತದೆ. ಅರೆ ಸ್ವಯಂಚಾಲಿತ ಯಂತ್ರದ ಬೆಲೆ 20 ಲಕ್ಷ ರೂಪಾಯಿಯಿದೆ. ಸ್ವಯಂಚಾಲಿತ ಯಂತ್ರದ ಬೆಲೆ 50 ಲಕ್ಷ ರೂಪಾಯಿ. ಆದ್ರೆ ಕೆಲವೇ ದಿನಗಳಲ್ಲಿ ನೀವು ಲಾಭ ಕಾಣಬಹುದು.