ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಅನೇಕ ಗ್ರಾಹಕರಿಗೆ ಇದ್ರ ಬಗ್ಗೆ ಸರಿಯಾದ ಮಾಹಿತಿಯಲ್ಲ. ವಾರ್ಷಿಕ ಕೇವಲ 342 ರೂಪಾಯಿ ಪಾವತಿಸುವ ಮೂಲಕ ಗ್ರಾಹಕರು 4 ಲಕ್ಷ ರೂಪಾಯಿವರೆಗೆ ಲಾಭ ಪಡೆಯಬಹುದಾಗಿದೆ.
ಬ್ಯಾಂಕ್, ಜನ್ ಧನ್ ಖಾತೆ ಗ್ರಾಹಕರಿಗೆ 2 ಲಕ್ಷ ರೂಪಾಯಿ ಆಕಸ್ಮಿಕ ವಿಮೆ ಸೌಲಭ್ಯ ನೀಡ್ತಿದೆ. ಇದಲ್ಲದೆ, 4 ಲಕ್ಷ ರೂಪಾಯಿ ಲಾಭ ಪಡೆಯಲು, ಸರ್ಕಾರದ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಈ ಯೋಜನೆಗಳು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ವಾರ್ಷಿಕ ಪ್ರೀಮಿಯಂ 330 ರೂಪಾಯಿ. ಈ ಯೋಜನೆಯಡಿಯಲ್ಲಿ ವ್ಯಕ್ತಿ ಜೀವ ರಕ್ಷಣೆಯನ್ನು ಪಡೆಯುತ್ತಾನೆ. ವಿಮೆ ಮಾಡಿದ ವ್ಯಕ್ತಿ ಸತ್ತರೆ, ಆತನ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಿಗುತ್ತದೆ.
ಇನ್ನೊಂದು, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ. ಇದು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಜೀವ ವಿಮೆಯನ್ನು ಒದಗಿಸುತ್ತದೆ. ಪಿಎಮ್‌ಎಸ್‌ಬಿವೈ ಕೇಂದ್ರ ಸರ್ಕಾರದಿಂದ ಬಂದಂತಹ ಯೋಜನೆಯಾಗಿದೆ. ಖಾತೆದಾರರು ಕೇವಲ 12 ರೂಪಾಯಿ ಹೂಡಿಕೆ ಮಾಡಿ 2 ಲಕ್ಷ ರೂಪಾಯಿಗಳ ವಿಮೆ ಪಡೆಯಬಹುದು.
ಕಡಿಮೆ ಹೂಡಿಕೆಯ ಮೇಲೆ ಪಿಂಚಣಿ ಗ್ಯಾರಂಟಿ ನೀಡಲು, ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಆರಂಭಿಸಿದೆ. ಅಟಲ್ ಪಿಂಚಣಿ ಯೋಜನೆಯಡಿ, ಸರ್ಕಾರವು ತಿಂಗಳಿಗೆ 1000 ರಿಂದ 5000 ರೂಪಾಯಿಗಳ ಪಿಂಚಣಿಯನ್ನು ಖಾತರಿಪಡಿಸುತ್ತದೆ.