ಕೆಲವೊಂದು ಬ್ಯುಸಿನೆಸ್ ಬಗ್ಗೆ ನಮಗೆ ತಿಳಿದಿರುವುದೇ ಇಲ್ಲ. ಹೀಗೂ ಮಾಡ್ಬಹುದಾ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸಿ ಬಿಟ್ಟಿರುವ ಬಟ್ಟೆಗಳಿರುತ್ತವೆ. ಕೆಲವರು ಒಂದೆರಡು ಬಾರಿ ಧರಿಸಿ ಅದನ್ನು ಮೂಲೆಗೆ ಹಾಕಿರುತ್ತಾರೆ. ಅಗತ್ಯವಿರುವವರಿಗೆ ಕೆಲವರು ನೀಡಿದ್ರೆ ಮತ್ತೆ ಕೆಲವರು ಮೂಟೆ ಕಟ್ಟಿ ಮನೆಯಲ್ಲಿಡುತ್ತಾರೆ. ಈ ಮೂಲೆಯಲ್ಲಿರುವ ಹಳೆ ಬಟ್ಟೆ ಮಾರಾಟ ಮಾಡಿ ನೀವು ಹಣ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಬಳಸಿದ ಬಟ್ಟೆಗೆ ಬೇಡಿಕೆ ಹೆಚ್ಚಾಗಿದೆ.
ಅನೇಕ ಕಂಪನಿಗಳು ಬಳಸಿದ ಬಟ್ಟೆ ಮಾರಾಟಕ್ಕೆ ಅವಕಾಶ ನೀಡ್ತಿವೆ. ಹಾಗಂತ ಹರಿದ ಹಳೆ ಬಟ್ಟೆಗಳನ್ನು ನೀವು ಇಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಬ್ರಾಂಡೆಡ್ ಬಟ್ಟೆಗಳಾಗಿರಬೇಕು. ಒಳ್ಳೆ ಬೆಲೆಗೆ ಹೋಗುವಂತಿರಬೇಕು. ನೋಡಲು ಸುಂದರವಾಗಿರುವ ಬಟ್ಟೆಗಳನ್ನು ನೀವು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು.
ಆನ್ಲೈನ್ ಮೂಲಕ ಹಳೆ ಬಟ್ಟೆ ಮಾರಾಟ ಮಾಡಲು ಕೆಲ ವೆಬ್ಸೈಟ್ ಗಳಿವೆ. https://www.etashee.com/ ನಲ್ಲಿ ನೀವು ಹಳೆ ಬಟ್ಟೆಗಳನ್ನು ಮಾರಾಟ ಮಾಡಬಹುದು. ಇದೊಂದು ಫ್ಯಾಷನ್ ವೆಬ್ಸೈಟ್ ಆಗಿದ್ದು. ಈಗಾಗಲೇ ಅನೇಕ ಗ್ರಾಹಕರನ್ನು ಇದು ಹೊಂದಿದೆ. ಇಲ್ಲಿ ಹಳೆ ಬಟ್ಟೆಯನ್ನು ಮಾರಾಟ ಮಾಡಿ ಇದೇ ವೆಬ್ಸೈಟ್ ನಿಂದ ಹೊಸ ವಸ್ತುಗಳನ್ನು ಖರೀದಿ ಮಾಡುವ ಗ್ರಾಹಕರು ಇಲ್ಲಿದ್ದಾರೆ.
https://elanic.in/ ವೆಬ್ಸೈಟ್ ಮೂಲಕವೂ ನೀವು ಹಳೆ ಬಟ್ಟೆಗಳನ್ನು ಮಾರಾಟ ಮಾಡಬಹುದು. ಇದನ್ನು ಸುಲಭವಾಗಿ ಬಳಸಬಹುದು. ಗ್ರಾಹಕ ಹಾಗೂ ಮಾರಾಟಗಾರನ ಮಧ್ಯೆ ಚಾಟಿಂಗ್ ಗೆ ಅವಕಾಶವಿದೆ. ಮಾರಾಟದ ಮೇಲೆ ಈ ಕಂಪನಿ ಕಮಿಷನ್ ಪಡೆಯುತ್ತದೆ.
ಹಳೆ ಬಟ್ಟೆ ಮಾರಾಟಕ್ಕಿರುವ ಇನ್ನೊಂದು ವೆಬ್ಸೈಟ್ https://confidentialcouture.com/. ಇದ್ರಲ್ಲಿ ಹಳೆ ಬಟ್ಟೆ ಮಾತ್ರವಲ್ಲ ಪರ್ಸ್, ಬ್ಯಾಗ್ ಸೇರಿದಂತೆ ಫ್ಯಾಷನ್ ಗೆ ಸಂಬಂಧಿಸಿದ ಹಳೆ ವಸ್ತುಗಳನ್ನು ಮಾರಾಟ ಮಾಡಬಹುದು. ಈ ವೆಬ್ಸೈಟ್ ಗೆ ಹೋಗಿ ಸೆಲ್ ವಿತ್ ಅಸ್ ಮೇಲೆ ಕ್ಲಿಕ್ ಮಾಡಿ ಸೈನ್ ಇನ್ ಆಗಬೇಕು.
ಮನೆಯಲ್ಲೇ ಕುಳಿತು ಈ ವೆಬ್ಸೈಟ್ ಮೂಲಕ ನಿಮ್ಮ ಬಟ್ಟೆಗಳನ್ನು ಮಾತ್ರವಲ್ಲ ಬೇರೆಯವರ ಬಟ್ಟೆ ಕೂಡ ಮಾರಾಟ ಮಾಡಬಹುದು. ಬೇರೆಯವರಿಂದ ಹಳೆ ಬಟ್ಟೆಗಳನ್ನು ಖರೀದಿ ಮಾಡಿ ನಂತ್ರ ವೆಬ್ಸೈಟ್ ನಲ್ಲಿ ಅದನ್ನು ಮಾರಾಟ ಮಾಡಿ ಗಳಿಸಬಹುದು.