ದೀಪಾವಳಿಯಲ್ಲಿ ಬಹುತೇಕ ಕಂಪನಿಗಳು ಬೋನಸ್ ನೀಡುತ್ವೆ. ಬೋನಸ್ ರೂಪದಲ್ಲಿ 50 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿ ಪಡೆಯುವವರೂ ಇದ್ದಾರೆ.
ಇದು ಕೆಲವರಿಗೆ ಸಣ್ಣ ಮೊತ್ತ ಎನ್ನಿಸಬಹುದು. ಅದೇ ಕಾರಣಕ್ಕೆ ಆಫರ್ ನೋಡ್ತಿದ್ದಂತೆ ಬಟ್ಟೆ, ಮನೆಗೆ ಬೇಕಾದ ವಸ್ತು ಖರೀದಿ ಮಾಡಿ ಹಣ ಹಾಳು ಮಾಡ್ತಾರೆ. ಶಾಪಿಂಗ್ ಬದಲು ಈ ಹಣವನ್ನು ಹೂಡಿಕೆ ಮಾಡಿ, ದೊಡ್ಡ ಮೊತ್ತ ಗಳಿಸಬಹುದು.
ಹೂಡಿಕೆ ಮಾರುಕಟ್ಟೆಯಲ್ಲಿ ಬ್ಯಾಂಕ್, ಸ್ಥಿರ ಠೇವಣಿ, ಗೋಲ್ಡ್ ಬಾಂಡ್, ಫಿಸಿಕಲ್ ಗೋಲ್ಡ್, ಅಂಚೆ ಕಚೇರಿ ಹೂಡಿಕೆ, ಮ್ಯೂಚುವಲ್ ಫಂಡ್ ಸೇರಿದಂತೆ ಅನೇಕ ಆಯ್ಕೆಗಳಿವೆ. ಇವುಗಳಲ್ಲಿ ಬ್ಯಾಂಕ್ ಎಫ್ಡಿ, ಅಂಚೆ ಕಚೇರಿ ಎಫ್ಡಿ ಸೇರಿದೆ. ಎಲ್ಲಿ ಎಷ್ಟು ಬಡ್ಡಿ ನಿಮಗೆ ಸಿಗಲಿದೆ ಎಂಬ ಮಾಹಿತಿ ಇದೆ.
SBI ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗಿನ ಎಫ್ಡಿ ಮೇಲೆ ಶೇಕಡಾ 2.9 ರಿಂದ 5.4 ರವರೆಗೆ ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡಾ 0.50 ಹೆಚ್ಚಿನ ದರದಲ್ಲಿ ಬಡ್ಡಿ ಸಿಗುತ್ತದೆ.
HDFC ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗಿನ ಎಫ್ ಡಿ ಮೇಲೆ ಶೇಕಡಾ 2.50 ರಿಂದ ಶೇಕಡಾ 5.50 ರಷ್ಟು ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡಾ 3 ರಿಂದ 6.25 ರ ಬಡ್ಡಿ ಸಿಗುತ್ತದೆ.
ICICI ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗಿನ ಎಫ್ ಡಿ ಮೇಲೆ ಶೇಕಡಾ 2.5 ರಿಂದ 5.50 ರಷ್ಟು ಬಡ್ಡಿ ನೀಡುತ್ತದೆ.
ಅಂಚೆ ಕಚೇರಿ, 1 ರಿಂದ 3 ವರ್ಷಗಳ ಅವಧಿಗೆ ಶೇಕಡಾ 5.5 ರ ಬಡ್ಡಿ ನೀಡುತ್ತದೆ. 5 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇಕಡಾ 6.7 ರಷ್ಟು ಬಡ್ಡಿ ನೀಡುತ್ತದೆ.
ಸ್ಥಿರ ಠೇವಣಿಗಳ ಹೊರತಾಗಿ, ದೀಪಾವಳಿ ಬೋನಸ್ ಮೊತ್ತವನ್ನು ಮ್ಯೂಚುಯಲ್ ಫಂಡ್‌ಗಳು ಅಥವಾ ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಚಿನ್ನವನ್ನೂ ಖರೀದಿಸಬಹುದು.