
ತಿಂಗಳ ಕೊನೆಯಲ್ಲಿ ಪ್ರತಿಯೊಬ್ಬರ ಜೇಬಿನಲ್ಲೂ ಹಣ ಇರುವುದಿಲ್ಲ. ಸಂಬಳ ಹೊರತು ಹೆಚ್ಚು ಹಣ ಗಳಿಸಲು ಬಯಸುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಸ್ಮಾರ್ಟ್ಫೋನ್ ಮೂಲಕ ನೀವು ಹಣ ಗಳಿಸಬಹುದು. ಏರ್ಟೆಲ್ ಮತ್ತು ರಿಲಯನ್ಸ್ ಜಿಯೋಗಳು ಒಂದು ಅನನ್ಯ ಕೊಡುಗೆಯನ್ನು ಆರಂಭಿಸಿವೆ. ಯಾವುದೇ ಬಳಕೆದಾರ, ಸ್ನೇಹಿತರು ಅಥವಾ ಕುಟುಂಬದವರ ಫೋನ್ ನಂಬರ್ ಗೆ ರೀಚಾರ್ಜ್ ಮಾಡಿ, ಕಮಿಷನ್ ಗಳಿಸಬಹುದು. ಏರ್ಟೆಲ್ ಮತ್ತು ಜಿಯೋ ಎರಡೂ ಕಂಪನಿಗಳು ಗ್ರಾಹಕರಿಗೆ ಈ ಅವಕಾಶ ನೀಡ್ತಿದೆ.
ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಷನ್ ನಲ್ಲಿ ಈ ಅವಕಾಶ ನೀಡ್ತಿದೆ. ಯಾವುದೇ ಬಳಕೆದಾರರು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಷನ್ ಮೂಲಕ, ಏರ್ಟೆಲ್ ನಂಬರ್ ರೀಚಾರ್ಜ್ ಮಾಡಿ, ಶೇಕಡಾ 4ರಷ್ಟು ನೇರ ಕಮಿಷನ್ ಗಳಿಸಬಹುದು. ಉದಾಹರಣೆಗೆ ಎ ಬಳಕೆದಾರ ಬಿ ಯ ಏರ್ಟೆಲ್ ಸಂಖ್ಯೆಗೆ 100 ರೂಪಾಯಿ ರೀಚಾರ್ಜ್ ಮಾಡಿದರೆ, ಪಾವತಿ ಮಾಡುವಾಗ ಕೇವಲ 96 ರೂಪಾಯಿ ಕಡಿತವಾಗಲಿದೆ. ಉಳಿದ ಹಣ ಕಮಿಷನ್ ರೂಪದಲ್ಲಿ ಆತನಿಗೆ ಸಿಗಲಿದೆ.
ರಿಲಯನ್ಸ್ ಜಿಯೋ ಇದೇ ರೀತಿಯ ಆಫರ್ ಆರಂಭಿಸಿದೆ. ಜಿಯೋ ಪಿಓಎಸ್ ಲೈಟ್ ಆಪ್ ಎಂದು ಕರೆಯಲ್ಪಡುವ ಒಂದು ಆಪ್ ಬಿಡುಗಡೆ ಮಾಡಿದೆ. ಗೂಗಲ್ ಪ್ಲೇಸ್ಟೋರ್ ಪುಟದಲ್ಲಿ ಜಿಯೋ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಒಬ್ಬರು 10 ನಿಮಿಷಗಳಲ್ಲಿ ಈ ಆಪ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ನಂತರ ಇತರರ ಜಿಯೋ ಸಂಖ್ಯೆಗಳನ್ನು ರೀಚಾರ್ಜ್ ಮಾಡಲು ಪ್ರಾರಂಭಿಸಬಹುದು. ಮೊದಲು ಗ್ರಾಹಕರು, ವ್ಯಾಲೆಟ್ ಗೆ ಹಣ ಹಾಕಿರಬೇಕು. ಆಗ ಮಾತ್ರ ರಿಚಾರ್ಜ್ ಮಾಡಲು ಸಾಧ್ಯ. ಕಮಿಷನ್, ಜಿಯೋಪೋಸ್ ಲೈಟ್ ಆಪ್‌ನ ವ್ಯಾಲೆಟ್‌ಗೆ ನೇರವಾಗಿ ಜಮಾ ಮಾಡಲಾಗುತ್ತದೆ.