ಬದಲಾಗುತ್ತಿರುವ ಜೀವನ ಶೈಲಿ ತೂಕವನ್ನು ಏರಿಸ್ತಿದೆ. ತೂಕ ನಿಯಂತ್ರಣಕ್ಕೆ ವ್ಯಾಯಾಮ, ಯೋಗ, ಜಿಮ್ ಜೊತೆ ಆಹಾರದಲ್ಲಿ ನಿಯಂತ್ರಣ ಬಹಳ ಮುಖ್ಯ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಸೇವನೆ ಮಾಡಿದ್ರೆ ತೂಕ ಕಡಿಮೆಯಾಗುತ್ತೆ ಎನ್ನೋದನ್ನು ಕೇಳಿರುತ್ತೇವೆ. ಅನೇಕರು ಇದ್ರ ಪಾಲನೆ ಕೂಡ ಮಾಡ್ತಿದ್ದಾರೆ. ಆದ್ರೆ ಅತಿಯಾದ್ರೆ ಅಮೃತವೂ ವಿಷ ಎಂಬುದು ಅನೇಕರಿಗೆ ತಿಳಿದಿಲ್ಲ.
ನಿಂಬೆ ನೀರನ್ನು ಅತಿ ಹೆಚ್ಚು ಸೇವನೆ ಮಾಡುವುದ್ರಿಂದ ದೇಹದಲ್ಲಿ ವಿಟಮಿನ್ ಸಿ ಹೆಚ್ಚಾಗುತ್ತದೆ. ಇದ್ರಿಂದ ಎಸಿಡಿಟಿ ಸಮಸ್ಯೆ ಕಾಡುತ್ತದೆ. ನೀವು ಪ್ರತಿದಿನ ನಿಂಬೆ ನೀರನ್ನು ಸೇವನೆ ಮಾಡುತ್ತಿದ್ದರೆ ನೆನಪಿರಲಿ, ದಿನದಲ್ಲಿ 2 ಕಪ್ ಗಿಂತ ಹೆಚ್ಚು ನಿಂಬೆ ನೀರಿನ ಸೇವನೆ ಮಾಡಬೇಡಿ.
ನಿಂಬೆ ಹಣ್ಣಿನಲ್ಲಿ ಸಿಟ್ರಸ್ ಆಮ್ಲವಿರುತ್ತದೆ. ಅದು ಹಲ್ಲುಗಳಿಗೆ ಹಾನಿಯುಂಟು ಮಾಡುತ್ತದೆ. ನಿಂಬೆ ನೀರು ಸೇವನೆ ಮಾಡುವಾಗ ಸ್ಟ್ರಾ ಬಳಸುವುದು ಒಳ್ಳೆಯದು.
ನಿಂಬೆ ನೀರನ್ನು ಅತಿ ಹೆಚ್ಚು ಸೇವನೆ ಮಾಡುವುದ್ರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ನಿಂಬು ನೀರಿನಲ್ಲಿ ಆಕ್ಸ್ಲೆಟ್ ಅಂಶ ಹೆಚ್ಚಿರುತ್ತದೆ. ಅದು ದೇಹದಲ್ಲಿ ಕ್ರಿಸ್ಟಲ್ ಉತ್ಪಾದನೆಗೆ ಕಾರಣವಾಗುತ್ತದೆ. ಇದ್ರಿಂದ ಕಲ್ಲು ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಎಸಿಡಿಟಿ ಸಮಸ್ಯೆಯಿರುವವರು ನಿಂಬು ನೀರಿನ ಸೇವನೆ ಮಾಡದಿರುವುದು ಒಳ್ಳೆಯದು. ಊಟದ ನಂತ್ರ ಜೀರ್ಣಕ್ರಿಯೆ ಸರಿಯಾಗ್ಲಿ ಎನ್ನುವ ಕಾರಣಕ್ಕೆ ಅನೇಕರು ನಿಂಬೆ ನೀರಿನ ಸೇವನೆ ಮಾಡ್ತಾರೆ. ಆದ್ರೆ ಇದು ಹೊಟ್ಟೆ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಆಹಾರದ ಜೊತೆ ನಿಂಬೆ ರಸ ಬೆರೆಸಿ ಸೇವನೆ ಮಾಡುವುದು ಒಳ್ಳೆಯದು.