alex Certify ಇ-ವೇ ಬಿಲ್ ಸರ್ವರ್ ಡೌನ್: ವಾಣಿಜ್ಯೋದ್ಯಮಿಗಳ ಪರದಾಟ | E Way Bill Server Down | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇ-ವೇ ಬಿಲ್ ಸರ್ವರ್ ಡೌನ್: ವಾಣಿಜ್ಯೋದ್ಯಮಿಗಳ ಪರದಾಟ | E Way Bill Server Down

ನವದೆಹಲಿ: ಸರಕು ಸಾಗಾಣಿಕೆಯ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡುವ, ಇನ್ಫೋಸಿಸ್ ನಿರ್ವಹಣೆ ಮಾಡುವ ಇ ವೇ ಬಿಲ್ ಸರ್ವರ್ ಡೌನ್ ಆದ ಕಾರಣ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ವಾಣಿಜ್ಯೋದ್ಯಮಿಗಳು ತಮ್ಮ ಸರಕು ಸಾಗಾಣಿಕೆಗೆ ಅನುಮತಿಗಾಗಿ ಪರದಾಟ ನಡೆಸಿದ್ದಾರೆ.

ಇ ವೇ ಬಿಲ್ ಸರ್ವರ್ ಡೌನ್ ಆದ ಮಾಹಿತಿ ಗೊತ್ತಾಗುತ್ತಿದ್ದಂತೆ ವಾಣಿಜ್ಯೋದ್ಯಮಿಗಳು ಇನ್ಫೋಸಿಸ್ ನಿರ್ವಹಿಸುತ್ತಿರುವ ಜಿಎಸ್​ಟಿ ಟೆಕ್ ಎಕ್ಸ್ ಖಾತೆಗೆ ಪೋಸ್ಟ್ ಮಾಡಿ ಟ್ಯಾಗ್ ಮಾಡಿ ಆಗಿರುವ ತೊಂದರೆ ಬಗ್ಗೆ ದೂರು ನೀಡಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಜಿಎಸ್​ಟಿ ಟೆಕ್ ಖಾತೆಯು ಪರ್ಯಾಯ ಮಾರ್ಗ ಸೂಚಿಸುವ ವೆಬ್ಸೈಟ್ ಗಳನ್ನು ನೀಡಿದೆ. ತೆರಿಗೆ ಪಾವತಿದಾರರು ಅದನ್ನು ಕೂಡ ಪ್ರಯತ್ನಿಸಿ ವೆಬ್ಸೈಟ್ ಸರಿಯಾಗಿ ಕಾರ್ಯನಿರ್ವಹಿಸಿದ ಬಗ್ಗೆ ದೂರು ನೀಡಿದ್ದಾರೆ.

ಸರಕು ಸಾಗಾಣಿಕೆಯ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡುವ ಇ ವೇ ಬಿಲ್ ನಲ್ಲಿ ಸರಕು ಮೂಲ, ಸಾರಿಗೆ ಮಾರ್ಗ, ತಲುಪುವ ಸ್ಥಳ, ಸಾಗಾಣೆದಾರರು ಮತ್ತು ಸ್ವೀಕರಿಸುವವರ ಸಂಪರ್ಕ ಮಾಹಿತಿ ಇರುತ್ತದೆ. 50 ಸಾವಿರ ರೂ. ಗಿಂತ ಹೆಚ್ಚಿನ ಮೌಲ್ಯದ ಸರಕು ಸಾಗಿಸುವ ವ್ಯಕ್ತಿ ಇ ವೇ ಬಿಲ್ ಹೊಂದುವುದು ಕಡ್ಡಾಯವಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...