ರಸ್ತೆಯಲ್ಲಿ ಪಟಾಕಿ ಹಚ್ಚಿದ್ದರ ಪರಿಣಾಮ ಇ- ರಿಕ್ಷಾಗೆ ಬೆಂಕಿ ಹೊತ್ತುಕೊಂಡು ಕನಿಷ್ಠ ಒಬ್ಬರು ಸಾವನ್ನಪ್ಪಿರೋ ಘಟನೆ ಗ್ರೇಟರ್ ನೋಯಿಡಾದಲ್ಲಿ ನಡೆದಿದೆ. ಈ ಘಟನೆ ನೆರೆಹೊರೆಯವರು ಮತ್ತು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.
ಈ ಪ್ರದೇಶದಲ್ಲಿ ಜಗನ್ನಾಥ ಯಾತ್ರೆ ವೇಳೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ, ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.
ರಸ್ತೆಯಲ್ಲಿರುವ ಅಂಗಡಿಯೊಂದರ ಸಿಸಿ ಕ್ಯಾಮೆರಾದಲ್ಲಿ ಭಯಾನಕ ಘಟನೆ ಸೆರೆಯಾಗಿದ್ದು ದುರಂತಕ್ಕೆ ಪಟಾಕಿಯೇ ಕಾರಣ ಎನ್ನಲಾಗಿದೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೀಡಿಯೊದಲ್ಲಿ ದಾದ್ರಿ ಪ್ರದೇಶದ ಸಣ್ಣ ಅಂಗಡಿಯೊಂದರ ಮುಂದೆ ಜನರು ಹಾದು ಹೋಗುತ್ತಿರುವಾಗ ಇ-ರಿಕ್ಷಾ ನಿಂತಿದೆ. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದೆ.
ತಕ್ಷಣ ಜನರು ಓಡಲಾರಂಭಿಸುತ್ತಾರೆ. ಇದೇ ವೇಳೆ ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಕೆಳಗೆ ಬೀಳುತ್ತಾರೆ. ಬೆಚ್ಚಿಬೀಳಿಸುವ ಈ ವಿಡಿಯೋ ರಸ್ತೆಯಲ್ಲಿ ಪಟಾಕಿ ಸಿಡಿಸುವುದು ಸುರಕ್ಷಿತವಲ್ಲ ಎಂಬುದನ್ನ ಸೂಚಿಸುತ್ತದೆ.