alex Certify ರಾಜ್ಯದಲ್ಲಿನ್ನು ಇ- ಆಸ್ತಿ ನೋಂದಣಿ ಕಡ್ಡಾಯ ವಿಧೇಯಕ ಅಂಗೀಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿನ್ನು ಇ- ಆಸ್ತಿ ನೋಂದಣಿ ಕಡ್ಡಾಯ ವಿಧೇಯಕ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ಇ- ನೋಂದಣಿ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದ್ದು, ಪೇಪರ್ ಖಾತಾ ಆಧಾರದಲ್ಲಿ ನೋಂದಣಿ ರದ್ದಾಗಿದೆ. ಇನ್ನು ಮುಂದೆ ನೋಂದಣಿಗೆ ಇ –ಆಸ್ತಿ(ಪ್ರಾಪರ್ಟಿ ರಿಜಿಸ್ಟ್ರೇಷನ್) ಕಡ್ಡಾಯ ಮಾಡಲಾಗಿದೆ.

ಕಾವೇರಿ 2 ತಂತ್ರಾಂಶದಲ್ಲಿ ಸ್ವಯಂ ಚಾಲಿತವಾಗಿ ನಗರಸಭೆ ವ್ಯಾಪ್ತಿಯ ಡೇಟಾಬೇಸ್ ಚೆಕ್ ಆಗಿದ್ದರೆ ಮಾತ್ರ ನೋಂದಣಿ ಆಗಲಿದೆ. ಕಾನೂನು ಬಾಹಿರ ನೋಂದಣಿಗೆ ಕಡಿವಾಣ ಹಾಕಲು ಕಾನೂನು ತಿದ್ದುಪಡಿ ಮಾಡಲಾಗಿದೆ.

ಕಡ್ಡಾಯವಾಗಿ ನೋಂದಾಯಿಸಲಾಗುವ ಆಯ್ದ ದಾಖಲೆಗಳ ಇ- ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾವಣೆ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ಇ- ಸ್ವತ್ತು, ನಗರ ಪ್ರದೇಶಗಳಿಗೆ ಇ- ಆಸ್ತಿ ನೋಂದಣಿ ಆಟೋಮೆಟಿಕ್ ಆಗಿ ಪರಿಶೀಲನೆ ಆಗಲಿದೆ.

ನಗರ ಪ್ರದೇಶದಲ್ಲಿ ನೋಂದಣಿ ಪೇಪರ್ ಖಾತಾ ಮೇಲೆ ನಡೆಯುತ್ತಿತ್ತು. ಇ- ಆಸ್ತಿ ನೋಂದಣಿಗೆ ಕಾವೇರಿ ತಂತ್ರಾಂಶದೊಂದಿಗೆ ಇತ್ತೀಚೆಗೆ ಜೋಡಣೆ ಮಾಡಲಾಗಿದ್ದು, ವಿಳಂಬವಿಲ್ಲದೆ ದಸ್ತಾವೇಜು ನೋಂದಣಿ ಮಾಡಿಕೊಳ್ಳಲು ಜನರಿಗೆ ಅನುಕೂಲವಾಗುತ್ತಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...