alex Certify ‘ಇ-ಮೇಲ್’ ಚಿತ್ರದ ವಿಡಿಯೋ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಇ-ಮೇಲ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಎಸ್ ಆರ್ ರಾಜನ್ ನಿರ್ದೇಶನದ ರಾಗಿಣಿ ದ್ವಿವೇದಿ ನಟನೆಯ ‘ಇ-ಮೇಲ್’ ಚಿತ್ರದ ‘ಸಿಂಡ್ರೆಲ್ಲಾ’ ಎಂಬ ರೋಮ್ಯಾಂಟಿಕ್ ವಿಡಿಯೋ ಹಾಡೊಂದನ್ನು ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಅಭಿಷೇಕ್ ಈ ಹಾಡಿಗೆ ಧ್ವನಿಯಾಗಿದ್ದು, ಗವಾಸ್ಕರ್ ಅವಿನಾಶ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ.

ನಿರ್ದೇಶಕ ಎಸ್ ಆರ್ ರಾಜನ್ ಈ ಚಿತ್ರವನ್ನು ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ನಲ್ಲಿ  ನಿರ್ಮಾಣ ಮಾಡಿದ್ದು,  ರಾಗಿಣಿ ದ್ವಿವೇದಿ ಹಾಗೂ ಮುರುಗ ಅಶೋಕ್ ಸೇರಿದಂತೆ ಅಕ್ಷಯ್ ರಾಜ್, ಅರತಿ ಶ್ರೀ, ಮಂಜು ನಂಜನಗೂಡು, ಶೈಲಜ, ಕುಮಾರಿ ಸಿಂಚನ, ನಯನ ತೆರೆ ಹಂಚಿಕೊಂಡಿದ್ದಾರೆ.

ರಾಜೇಶ್ ಕುಮಾರ್ ಅವರ ಸಂಕಲನ, ಸೆಲ್ವನ್ ಮಾದಪ್ಪನ್ ಛಾಯಾಗ್ರಹಣವಿದೆ. ಕನ್ನಡ ಹಾಗೂ ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ  ರಿಲೀಸ್ ಮಾಡುವುದಾಗಿ ಚಿತ್ರತಂಡ ಇತ್ತೀಚಿಗಷ್ಟೇ ವಾಹಿನಿಯಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...