ಬೆಂಗಳೂರು: ಪಡಿತರ ಚೀಟಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಧಾರ್ ದೃಢೀಕರಣ ದಿನಾಂಕವನ್ನು ಆಹಾರ ಇಲಾಖೆ ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ ಮಾಡಿದೆ.
ಸೆಪ್ಟೆಂಬರ್ 11 ರಿಂದ 30ರವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಇ -ಕೆವೈಸಿ ಸಂಗ್ರಹಿಸುವಂತೆ ತಿಳಿಸಲಾಗಿದೆ.
ಈ ಮೊದಲು ಪ್ರತಿ ತಿಂಗಳ ಒಂದರಿಂದ 10ನೇ ತಾರೀಖಿನವರೆಗೆ ಇ-ಕೆವೈಸಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ಅವಧಿಯನ್ನು ಸೆಪ್ಟಂಬರ್ 30ರವರೆಗೆ ವಿಸ್ತರಿಸಿ ಆಹಾರ ಇಲಾಖೆ ಆದೇಶ ಹೊರಡಿಸಿದ್ದು, ಪಡಿತರ ಚೀಟಿದಾರರಿಗೆ ಇ -ಕೆವೈಸಿ ಮಾಡಿಸಲು ಅವಕಾಶ ನೀಡಿದೆ. ಬೋಗಸ್ ಕಾರ್ಡ್ ಗಳನ್ನು ಪತ್ತೆ ಮಾಡುವ ಉದ್ದೇಶದಿಂದ ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.