alex Certify BPL ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ, ಇ-ಕೆವೈಸಿ ಇಲ್ಲದವರ ಪಡಿತರ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BPL ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ, ಇ-ಕೆವೈಸಿ ಇಲ್ಲದವರ ಪಡಿತರ ಸ್ಥಗಿತ

ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರು ಇ -ಕೆವೈಸಿ ಮಾಡಿಸಲು ಅಕ್ಟೋಬರ್ 31 ರವರೆಗೆ ಅವಕಾಶವಿದೆ. ಕೂಡಲೇ ಪಡಿತರ ಕೇಂದ್ರಕ್ಕೆ ತೆರಳಿ ಆಧಾರ್, ಬೆರಳಚ್ಚು ನೀಡುವ ಮೂಲಕ ಇ -ಕೆವೈಸಿ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಕಾರ್ಡ್ ರದ್ದಾಗಲಿದ್ದು, ಪಡಿತರ ಕೂಡ ಸಿಗುವುದಿಲ್ಲ.

10 ಹತ್ತು ದಿನ ಸಮಯಾವಕಾಶವಿದೆ. ಅಷ್ಟರೊಳಗೆ ಇ -ಕೆವೈಸಿ ಮಾಡಿಸಿಕೊಳ್ಳುವಂತೆ ಆಹಾರ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಇ –ಕೆವೈಸಿ ಮಾಡಿಸದಿದ್ದರೆ ಪಡಿತರ ಹಂಚಿಕೆ ರದ್ದು ಮಾಡಲಾಗುವುದು. ಅನಧಿಕೃತ ಬಿಪಿಎಲ್ ಕಾರ್ಡ್ ಗಳನ್ನು ಪತ್ತೆಮಾಡಲು ಇ-ಕೆವೈಸಿ ಕಡ್ಡಾಯ ಮಾಡಲಾಗಿದೆ.

ಶ್ರೀಮಂತರು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡು ಬಡವರಿಗೆ ನೀಡುವ ಪಡಿತರವನ್ನು ಪಡೆಯುತ್ತಿದ್ದಾರೆ. ಕೆಲವರು ಮೃತಪಟ್ಟವರ ಹೆಸರಲ್ಲಿಯೂ ಪಡಿತರ ಪಡೆಯುತ್ತಿದ್ದು, ಇಂತಹ ಅಕ್ರಮಗಳಿಗೆಲ್ಲ ಕಡಿವಾಣ ಹಾಕಲು ಇ –ಕೆವೈಸಿ ಕಡ್ಡಾಯ ಮಾಡಲಾಗಿದ್ದು, ಅ. 31 ಕೊನೆ ದಿನವಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...