ಬೆಂಗಳೂರು: ಆಡಳಿತಕ್ಕೆ ಮತ್ತೆ ಸರ್ಜರಿ ನಡೆಸಲಾಗಿದ್ದು, 35 ಡಿವೈಎಸ್ಪಿ, 88 ಇನ್ಸ್ ಪೆಕ್ಟರ್ ಗಳನ್ನು ಪೊಲೀಸ್ ಇಲಾಖೆ ವರ್ಗಾವಣೆ ಮಾಡಿದೆ.
ಎರಡು ವರ್ಷಗಳ ಕಾಲಾವಧಿ ನಿಯಮ ಜಾರಿಯಾದ ನಂತರ ಮೊದಲ ಬಾರಿಗೆ 35 ಡಿವೈಎಸ್ಪಿ ಮತ್ತು 88 ಇನ್ಸ್ಪೆಕ್ಟರ್ ಗಳನ್ನು ಸೋಮವಾರ ಪೊಲೀಸ್ ಇಲಾಖೆ ವರ್ಗಾವಣೆ ಮಾಡಿದೆ. ಇನ್ಸ್ಪೆಕ್ಟರ್ ಮೇಲ್ಪಟ್ಟದ ಅಧಿಕಾರಿಗಳ ಕಾರ್ಯನಿರ್ವಹಣೆಗೆ ರಾಜ್ಯ ಸರ್ಕಾರ ಎರಡು ವರ್ಷಗಳ ಕಾಲಾವಧಿ ನಿಗದಿಗೊಳಿಸಿ ನಿಯಮ ಜಾರಿ ಮಾಡಿದೆ. ಈ ನೀತಿಗೆ ಆಕ್ಷೇಪಿಸಿ ಅನೇಕ ಅಧಿಕಾರಿಗಳು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರದ ನೀತಿಯನ್ನು ಕೆಎಟಿ ಎತ್ತಿ ಹಿಡಿದಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ಇನ್ಸ್ ಪೆಕ್ಟರ್ ಮೇಲ್ಮಟ್ಟದ ಅಧಿಕಾರಿಗಳ ಕಾರ್ಯ ನಿರ್ವಹಣೆಗೆ ಎರಡು ವರ್ಷಗಳ ಕಾಲಾವಧಿ ಹೊಸ ನೀತಿ ಅನುಸಾರ ವರ್ಗಾವಣೆಗೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 35 ಡಿವೈಎಸ್ಪಿ, 88 ಇನ್ಸ್ಪೆಕ್ಟರ್ ಗಳನ್ನು ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.