
ಬೆಂಗಳೂರು: ಪರಸ್ತ್ರೀ ಸಹವಾಸದಿಂದ ಪತ್ನಿಅನ್ನೇ ಕೊಲೆ ಮಾಡಲು ಪ್ರೋಬೇಷನರಿ ಡಿವೈ ಎಸ್ ಪಿ ಗೋವರ್ಧನ್ ಸಂಚು ರೂಪಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಡಿವೈ ಎಸ್ ಪಿ ವಿರುದ್ಧ ಸ್ವತಃ ಅವರ ಪತ್ನಿ ಅಮೃತಾ ದೂರು ದಾಖಲಿಸಿದ್ದು, ಗೋವರ್ಧನ್ ಹಾಗೂ ಪೋಷಕರು, ಗೆಳತಿ ಮಹಿಳಾ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ಪ್ರೊಬೇಷನರಿ ಡಿವೈ ಎಸ್ ಪಿ ಗೋವರ್ಧನ್ ವಿರುದ್ಧ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ಪರಸ್ತ್ರೀಗೆ ಮಕ್ಕಳಿದ್ದರೂ ತನ್ನ ಪತಿ ಆಕೆಯ ಸಹವಾಸ ಮಾಡಿದ್ದು, ಪತಿ ಎಲ್ಲೇ ಕೆಲಸಕ್ಕೆ ಸೇರಿದರೂ ಆಕೆಯೂ ಅಲ್ಲಿಗೆ ಬರುತ್ತಾಳೆ. ಇದನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅಮೃತಾ ದೂರಿದ್ದಾರೆ.
ಅಲ್ಲದೇ ಗೋವರ್ಧನ್ ತನಗೆ ಹೊಟ್ಟೆಗೆ ಒದ್ದು, ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ತನ್ನ ಪತಿ ಜೊತೆ ಸಹವಾಸ ಮಾಡದಂತೆ ಅವರ ಗೆಳತಿಗೂ ಬುದ್ಧಿ ಹೇಳಿದ್ದರೂ ಆಕೆ ಸಹವಾಸ ಬಿಟ್ಟಿಲ್ಲ. ಅಮೃತಾ ಮೇಲೆಸುಳ್ಳು ಕೇಸ್ ಹಾಕುವುದಾಗಿ ಆಕೆಯೇ ಬೆದರಿಕೆಯೊಡ್ದಿದ್ದಾಳೆ. ಈ ಬಗ್ಗೆ ಅತ್ತೆ-ಮಾವನ ಬಳಿ ಹೇಳಿಕೊಂಡು ಸಂಕಷ್ಟ ತೋಡಿಕೊಂಡರೆ ಅತ್ತ-ಮಾವ ಕೂಡ ಬೆಂಬಲಕ್ಕೆ ನಿಲ್ಲದೇ ನನ್ನ ಕೊಲೆಗೆ ಯತ್ನಿಸಿದ್ದಾರೆ.
ಅತ್ತೆ ನನ್ನ ಮೇಲೆ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿದ್ದಾರೆ. ಇದರಿಂದ ಬೇಸತ್ತು ಡಿಜಿಗೆ ದೂರು ನೀಡಿದ್ದೆ. ಇಲಕಹೆ ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಿ ಕಳುಹಿಸಿತ್ತು. ಕೆಲ ದಿನಗಳ ಬಳಿಕ ಮತ್ತೆ ಗೆಳತಿ ಜೊತೆ ಗೋವರ್ಧನ್ ಓಡಾಟ ನಡೆಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರು ಸೇರಿ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಅಮೃತಾ ಆರೋಪಿಸಿದ್ದಾರೆ.
ಅಮೃತಾ ದೂರು ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಠಾಣೆಯಲ್ಲಿ ಡಿವೈಎಸ್ ಪಿ ಗೋವರ್ಧನ್, ಪೋಷಕರು ಹಾಗೂ ಗೆಳತಿ ವಿರುದ್ಧ ಕೊಲೆ ಸಂಚು ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ.