![](https://kannadadunia.com/wp-content/uploads/2023/09/6959d176-bea8-4baf-a481-41563ff845b1.jpg)
ಕನ್ನಡ ಸೇರಿದಂತೆ ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಖ್ಯಾತ ಹಿರಿಯ ನಟ ದೇವರಾಜ್ ಇಂದು ತಮ್ಮ 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
1985ರಲ್ಲಿ ತೆರೆಕಂಡ ‘ತ್ರಿಶೂಲ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಡೈನಮಿಕ್ ಸ್ಟಾರ್ ದೇವರಾಜ್ ನಾಯಕನಟನಾಗಿ, ಖಳನಾಯಕನಾಗಿ ಮತ್ತು ಪೋಷಕ ಪಾತ್ರದಲ್ಲಿ ಮಿಂಚಿದ್ದಾರೆ.
1989 ರಲ್ಲಿ ‘ಹತ್ಯಾಕಾಂಡ’ ಚಿತ್ರದಲ್ಲಿ ದೇವರಾಜ್ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದರು. ನಟ ದೇವರಾಜ್ ಇತ್ತೀಚಿಗೆ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಕಳೆದ ವರ್ಷ ‘ಹೆಡ್ ಬುಶ್’, ‘ಬನಾರಸ್’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು.
ಇದೀಗ ತಮ್ಮ ಪುತ್ರ ಪ್ರಜ್ವಲ್ ದೇವರಾಜ್ ಅವರ ‘ತತ್ಸಮ ತದ್ಭವ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಿನಿ ತಾರೆಯರಿಂದ ಹಾಗೂ ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.