alex Certify ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಸಂಬಳ ಕೇಳಿದ್ರೆ ಬೆರಗಾಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಸಂಬಳ ಕೇಳಿದ್ರೆ ಬೆರಗಾಗ್ತೀರಾ…!

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ರಷ್ಟೇ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಖ್ಯಾತಿ ಪಡೆದಿದ್ದಾರೆ. ಎಸ್‌ಆರ್‌ಕೆ ಜೊತೆಗೆ ಐಪಿಎಲ್ ಪಂದ್ಯಗಳಿಗೆ ಹಾಜರಾಗುವುದರಿಂದ ಹಿಡಿದು ಶಾರುಖ್ ಜೊತೆಗೆ ಸಭೆಗಳಿಗೆ ಹಾಜರಾಗುವವರೆಗೆ ಪೂಜಾ, ಶಾರುಖ್ ಪರವಾಗಿ ಎಲ್ಲಾ ಕೆಲಸಗಳನ್ನೂ ನಿಭಾಯಿಸುತ್ತಾರೆ. ಈ ಮೂಲಕ ಶಾರುಖ್ ಕೆಲಸಗಳನ್ನು ಸಮರ್ಥವಾಗಿ ಮತ್ತು ಸುಲಭವಾಗಿ ನಿರ್ವಹಿಸುತ್ತಾರೆ. ಆದಾಗ್ಯೂ ಎಸ್‌ಆರ್‌ಕೆ ಅಭಿಮಾನಿಗಳು ಪೂಜಾ ದದ್ಲಾನಿಯವರ ಸಂಬಳ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಪ್ರಶ್ನೆಗಳನ್ನು ಹೊಂದಿದ್ದಾರೆ.

ವರದಿಗಳ ಪ್ರಕಾರ ಪೂಜಾ ಅವರ ಸಂಭಾವನೆ ತಿಂಗಳಿಗೆ 60 ಲಕ್ಷ. ಅವರ ವಾರ್ಷಿಕ ಸಂಭಾವನೆ 7-9 ಕೋಟಿ ರೂ. 2021 ರಲ್ಲಿನ ವರದಿ ಪ್ರಕಾರ ಅವರ ನಿವ್ವಳ ಮೌಲ್ಯವು ಸುಮಾರು 45-50 ಕೋಟಿ ರೂ.

ಪೂಜಾ ದದ್ಲಾನಿ ಮುಂಬೈನ ಬಾಂದ್ರಾದಲ್ಲಿನ ಫಾರ್ಚೂನ್ ಹೈಟ್ಸ್ ನಲ್ಲಿ ಫ್ಲಾಟ್ ಹೊಂದಿದ್ದಾರೆ. ಖ್ಯಾತ ವಿನ್ಯಾಸಕ ಮತ್ತು ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರೇ ಮನೆಯನ್ನು ನವೀಕರಿಸಿದ್ದಾರೆ. ವರದಿಗಳ ಪ್ರಕಾರ ಆ ಮನೆಯ ಮೌಲ್ಯವು 5.6- 7.88 ಕೋಟಿ ರೂ.

ಪೂಜಾ ದಾದ್ಲಾನಿ 2008 ರಲ್ಲಿ ಲಿಸ್ಟಾ ಜ್ಯುವೆಲ್ಸ್ ನ ನಿರ್ದೇಶಕರಾದ ಹಿತೇಶ್ ಗುರ್ನಾನಿ ಅವರನ್ನು ವಿವಾಹವಾದರು. ಅವರಿಗೆ ರೇನಾ ದಾದ್ಲಾನಿ ಎಂಬ ಮಗಳಿದ್ದಾಳೆ. ಪೂಜಾ ದದ್ಲಾನಿ ಅವರು ದಿಯಾ ಮಿರ್ಜಾ ಅವರ ಪತಿ ವೈಭವ್ ರೇಖಿ ಅವರೊಂದಿಗೆ ಕೌಟುಂಬಿಕ ಸಂಬಂಧವನ್ನು ಹೊಂದಿದ್ದಾರೆ.

ಶಾರುಖ್ ಖಾನ್ ವೃತ್ತಿ ಜೀವನದಲ್ಲಿ ಪೂಜಾ ಅವರ ಕೊಡುಗೆ ಅಪಾರ. 2021 ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದ ಶಾರುಖ್ ಪುತ್ರ ಆರ್ಯನ್ ಖಾನ್ ಅವರ ಪರ ಕಾನೂನು ಪ್ರಕ್ರಿಯೆ, ಐಪಿಎಲ್ ಪಂದ್ಯಗಳಲ್ಲಿ ಎಸ್‌ಆರ್‌ಕೆ ಮತ್ತು ಕುಟುಂಬದೊಂದಿಗೆ ಕೈಜೋಡಿಸಿ ಕೆಲಸ ಮಾಡುವುದು, ಎಸ್‌ಆರ್‌ಕೆ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಅನ್ನು ನೋಡಿಕೊಳ್ಳುವುದು ಮುಂತಾದ ನಿರ್ಣಾಯಕ ಕೆಲಸಗಳನ್ನು ಅವರು ನಿಭಾಯಿಸಿದ್ದಾರೆ. ಪೂಜಾ ದದ್ಲಾನಿ, ಶಾರುಖ್ ಪತ್ನಿ ಗೌರಿ ಮತ್ತು ಶಾರುಖ್ ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್‌ರಾಮ್ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...