ಚೆನ್ನೈ: ಮಾಜಿ ಸಚಿವರಿಬ್ಬರ ನಿವಾಸಗಳ ಮೇಲೆ ಕೇಂದ್ರ ವಿಚಕ್ಷಣ ಆಯೋಗ ದಾಳಿ ನಡೆಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಮಾಜಿ ಸಚಿವರಾದ ಎಸ್ ಪಿ ವೇಲುಮಣಿ ಹಾಗೂ ಸಿ.ವಿಜಯಭಾಸ್ಕರ್ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಕಟ್ಟಡಗಳ ಮೇಲೆ ದಾಳಿ ನಡೆಸಲಾಗಿದೆ.
ಎಸ್ ಪಿ ವೇಲುಮಣಿ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ತಮ್ಮದೇ ಮುಚ್ಚಿದ ಕಂಪನಿಗಳಿಗೆ ಟೆಂಡರ್ ನೀಡಲು ಹಿಂದೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದರು ಎಂಬ ಆರೋಪ ಹಿನ್ನೆಲೆಯಲ್ಲಿ ವಿಚಕ್ಷಣ ಆಯೋಗ ದಾಳಿ ನಡೆಸಿದೆ.
2015 ಹಾಗೂ 18ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಲೆಡ್ ಲೈಟ್ ಗಳೊಂದಿಗೆ ಬದಲಾಯಿಸಲು ಟೆಂಡರ್ ನೀಡಲಾಗಿತ್ತು. ನಷ್ಟದಲ್ಲಿರುವ ಕಂಪನಿಗಳಿಗೆ ಟೆಂಡರ್ ನೀಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ನಷ್ಟವಾಗಿದೆ ಎಂಬ ಆರೋಪ ಕೇಳಿಬಂದಿತ್ತು.