alex Certify BIG NEWS : ದಸರಾ ಆನೆ ಅರ್ಜುನನ ಸಮಾಧಿ ವಿರೂಪ ಪ್ರಕರಣ ; ಆರೋಪಿ ವಿರುದ್ಧ ‘FIR’ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ದಸರಾ ಆನೆ ಅರ್ಜುನನ ಸಮಾಧಿ ವಿರೂಪ ಪ್ರಕರಣ ; ಆರೋಪಿ ವಿರುದ್ಧ ‘FIR’ ದಾಖಲು

ಬೆಂಗಳೂರು : ದಸರಾ ಆನೆ ಅರ್ಜುನನ ಸಮಾಧಿ ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.

ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯ ಅರಣ್ಯಾಧಿಕಾರಿ ಎಚ್ಡಿ ಕೋಟೆಯ ನವೀನ್ ವಿರುದ್ದ ಎಫ್ಐಆರ್ ದಾಖಲಾಗಿದೆ . ತಾವು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ನವೀನ್ ಮತ್ತು ಇತರರು, ಮೀಸಲು ಅರಣ್ಯದೊಳಗೆ ಅತಿಕ್ರಮವಾಗಿ ಪ್ರವೇಶ ಮಾಡಿ ಸಮಾಧಿಯ ಮಣ್ಣು ಬಗೆದಿದ್ದರು. ಅನಧಿಕೃತವಾಗಿ ಜನರಿಂದ ಹಣ ಸುಲಿಗೆ ಮಾಡಿ ಸಮಾಧಿ ಬಗೆದು ವಿರೂಪಗೊಳಿಸಿದ್ದಾರೆ ಎಂದು ಜನರು ಆರೋಪಿಸಿದ್ದರು. ಈ ಹಿನ್ನಲೆ ಪ್ರಕರಣ ದಾಖಲಿಸಲಾಗಿದೆ.

ಮೈಸೂರು ದಸರಾ ಅಂಬಾರಿ ಹೊರುತ್ತಿದ್ದ ಕ್ಯಾಪ್ಟನ್ ಅರ್ಜುನ ಆನೆ 2023 ಡಿಸೆಂಬರ್ ನಲ್ಲಿ ಸಕಲೇಶಪುರದಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದು, ಅರ್ಜುನ ಆನೆಗೆ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ಹೇಳಿತ್ತು.ಅರ್ಜುನ ಆನೆ ಸ್ಮಾರಕ ಹೆಸರಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲೆಯ ನವೀನ್ ಹೆಚ್.ಎನ್. ಎಂಬುವರು ಅರ್ಜುನ ಪಡೆ ಎಂಬ ಗ್ರೂಪ್ ಕ್ರಿಯೇಟ್ ಮಾಡಿ ಅರ್ಜುನ ಆನೆ ಸ್ಮಾರಕಕ್ಕೆ ಆರ್ಥಿಕ ನೆರವು ಕೋರಿದ್ದಾರೆ. ಇದನ್ನು ನಂಬಿದ ನೂರಾರು ಜನ ಹಣದ ಸಹಾಯ ಮಾಡಿದ್ದಾರೆ. ಮೈಸೂರಿನ ಯುವಕ ನವೀನ್ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಜಮಾ ಆಗಿದೆ ಎಂದು ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಆರೋಪಿಸಿದ್ದರು.

 

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...