alex Certify ಮಳೆಗಾಲದಲ್ಲಿ ಇವನ್ನೆಲ್ಲ ತಿಂದ್ರೆ ʼರೋಗʼವನ್ನು ಆಹ್ವಾನಿಸಿದಂತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಇವನ್ನೆಲ್ಲ ತಿಂದ್ರೆ ʼರೋಗʼವನ್ನು ಆಹ್ವಾನಿಸಿದಂತೆ

ಒಂದೇ ಸಮನೆ ಮಳೆ ಸುರಿಯುತ್ತಿದ್ರೆ ಹಸಿವು ಕೂಡ ಜಾಸ್ತಿ. ಆಗಾಗ ಏನಾದ್ರೂ ಮೆಲ್ಲುತ್ತಲೇ ಇರಬೇಕು ಎನಿಸುತ್ತದೆ. ಮಳೆ ಮತ್ತು ಹಸಿವಿಗೆ ಅವಿನಾಭಾವ ಸಂಬಂಧವಿದೆ.

ಮಳೆಗಾಲದಲ್ಲಿ ನಾವು ಮನೆಯಲ್ಲಿ ಬೆಚ್ಚಗೆ ಕುಳಿತು ಕರಿದ ತಿಂಡಿ ಮತ್ತು ಚಹಾ ಸವಿಯುತ್ತೇವೆ.

ಆದ್ರೆ ಮಾನ್ಸೂನ್ ನಲ್ಲಿ ಊಟ ತಿಂಡಿ ಬಗ್ಗೆ ವಿಶೇಷ ಗಮನ ಕೊಡಬೇಕು. ಯಾಕಂದ್ರೆ ಈ ಸಮಯದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಲ್ ಇನ್ಫೆಕ್ಷನ್ ಗಳು ಅತ್ಯಂತ ವೇಗವಾಗಿ ಹರಡುತ್ತವೆ. ಹಾಗಾಗಿ ನೀವು ತಿನ್ನೋ ಪದಾರ್ಥಗಳಿಂದ್ಲೇ ಮಳೆಗಾಲದಲ್ಲಿ ಅನಾರೋಗ್ಯ ಕಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಕೆಳಕಂಡ ಆಹಾರವನ್ನು ಸೇವಿಸಬೇಡಿ.

ಕರಿದ ತಿನಿಸು : ಕುರುಕಲು ತಿಂಡಿ ಇಷ್ಟಪಡುವವರಿಗೆ ಇದು ಬೇಸರದ ಸಂಗತಿ. ಆದ್ರೂ ಪಕೋಡಾ, ಸಮೋಸಾದಂತಹ ಎಣ್ಣೆಯಲ್ಲಿ ಕರಿದ ತಿನಿಸುಗಳನ್ನು ಮಳೆಗಾಲದಲ್ಲಿ ತಿನ್ನಬೇಡಿ. ಇವು ನಿಮ್ಮ ಜೀರ್ಣಶಕ್ತಿಯನ್ನೇ ಕುಗ್ಗಿಸುತ್ತವೆ. ಹೊಟ್ಟೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಎಲೆಗಳುಳ್ಳ ತರಕಾರಿ : ಸೊಪ್ಪು ತರಕಾರಿಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ವಾ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇವು ಆರೋಗ್ಯಕ್ಕೆ ಪೂರಕ ಅನ್ನೋದು ನಿಜ, ಆದ್ರೆ ಮಳೆಗಾಲದಲ್ಲಲ್ಲ. ಮಳೆಗಾಲದಲ್ಲಿ ಮಣ್ಣು ರಾಡಿಯಾಗಿರುತ್ತದೆ, ಈ ಸಮಯದಲ್ಲಿ ಎಲೆಗಳಲ್ಲಿ ಬ್ಯಾಕ್ಟೀರಿಯಾಗಳು ಅಡಗುವ ಸಾಧ್ಯತೆ ಹೆಚ್ಚು. ಹಸಿ ತರಕಾರಿಗಳ ಮೇಲೆ ಕೀಟಗಳು ದಾಳಿ ಮಾಡುತ್ತವೆ. ಹಾಗಾಗಿ ಪಾಲಕ್, ಕ್ಯಾಬೇಜ್ ಮತ್ತು ಹೂಕೋಸನ್ನು ಮಳೆಗಾಲದಲ್ಲಿ ತಿನ್ನಬೇಡಿ. ಅದರ ಬದಲು ಸೋರೇಕಾಯಿ, ಹೀರೇಕಾಯಿ, ಹಾಗಲಕಾಯಿ ಬಳಸಿ.

ಸೀ ಫುಡ್ : ಮೀನು ಮತ್ತು ಸೀಗಡಿ ಅಂದ್ರೆ ಮಾಂಸಪ್ರಿಯರು ಬಾಯಿ ಚಪ್ಪರಿಸ್ತಾರೆ. ಆದ್ರೆ ಮಳೆಗಾಲದಲ್ಲಿ ಇವನ್ನು ಸೇವಿಸಬೇಡಿ. ಯಾಕಂದ್ರೆ ಮೀನುಗಾರರು ಮಳೆಗಾಲದಲ್ಲಿ ಮೀನು ಹಿಡಿಯಲು ತೆರಳುವುದಿಲ್ಲ. ಹಾಗಾಗಿ ಅವು ಫ್ರೆಶ್ ಆಗಿರುವುದಿಲ್ಲ. ಮಳೆಗಾಲದಲ್ಲಿ ಸೀ ಫುಡ್ ಸೇವನೆಯಿಂದ ಇನ್ಫೆಕ್ಷನ್ ಉಂಟಾಗಬಹುದು.

ರಸ್ತೆಬದಿಯ ಹಣ್ಣಿನ ಜ್ಯೂಸ್ : ಹಣ್ಣುಗಳು ತಾಜಾ ಇದ್ದಾಗ್ಲೇ ತಿನ್ನಬೇಕು. ಆದ್ರೆ ರಸ್ತೆ ಬದಿಯ ಜ್ಯೂಸ್ ಮಳಿಗೆಗಳಲ್ಲಿ ಗಂಟೆಗಳ ಹಿಂದೆಯೇ ಹಣ್ಣುಗಳನ್ನು ಕತ್ತರಿಸಿ ಇಟ್ಟಿರ್ತಾರೆ. ಮಳೆಗಾಲದಲ್ಲಿ ಹಣ್ಣನ್ನು ಬಹಳ ಸಮಯದವರೆಗೆ ಕತ್ತರಿಸಿ ಇಟ್ರೆ ಅದು ಕಲುಷಿತಗೊಳ್ಳುತ್ತದೆ. ನೀರಿನಿಂದ ರೋಗ ಹರಡುವುದು ಕೂಡ ಇದೇ ಋತುವಿನಲ್ಲಿ. ಹಾಗಾಗಿ ಜ್ಯೂಸ್ ಕುಡಿಯಬೇಕು ಎನಿಸಿದ್ರೆ ಮನೆಯಲ್ಲೇ ತಯಾರಿಸಿಕೊಳ್ಳಿ.

ತಂಪು ಪಾನೀಯಗಳು : ಫ್ರಿಡ್ಜ್ ನಲ್ಲಿಟ್ಟಿರೋ ತಂಪು ಪಾನೀಯಗಳು ನಮ್ಮ ಜೀರ್ಣಶಕ್ತಿಯನ್ನು ಕುಂಠಿತಗೊಳಿಸುತ್ತವೆ. ನಮ್ಮ ದೇಹದಲ್ಲಿರುವ ಲೋಹದ ಅಂಶಗಳನ್ನು ಕಡಿಮೆ ಮಾಡುತ್ತವೆ. ಹಾಗಾಗಿ ತಂಪು ಪಾನೀಯದ ಬದಲು ನಿಂಬೆ ಹಣ್ಣಿನ ಜ್ಯೂಸ್, ಬೆಲ್ಲದ ಶರಬತ್ತು ಮತ್ತು ಆಮ್ಲಾ ಜ್ಯೂಸ್ ಕುಡಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...