ವಿಜಯಪುರ : ಮತ ಎಣಿಕೆ ವೇಳೆ ಮತ ಎಣಿಕಾ ಅಧಿಕಾರಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಜಯಪುರದಲ್ಲಿ ನಡೆದಿದೆ.
ಆದಿಲ್ ಶಾಹಿ ಸದನದಲ್ಲಿ ಕೌಂಟಿಂಗ್ ಸುಪರ್ ವೈಸರ್ ಆಗಿ ನೇಮಕಗೊಂಡಿದ್ದ ಅಧಿಕಾರಿ ಸಿದ್ದರಾಜ ದೊಡ್ಡಮನಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಸೈನಿಕ ಶಾಲೆಯ ಆವರಣದಲ್ಲೇ ಸ್ಥಾಪಿಸಲಾಗಿರುವ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.