ಅಸ್ಸಾಂ : ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಅಸ್ಸಾಂ ನಲ್ಲಿ ನಡೆದಿದೆ.
ಲಖಿಂಪುರ ಪಟ್ಟಣದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂ ಮೂಲಕ ಹಾದುಹೋಗುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಅದರ ಪೋಸ್ಟರ್ ಗಳು ಮತ್ತು ಬ್ಯಾನರ್ ಗಳನ್ನು ಹರಿದುಹಾಕಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ. ನಂತರ ಇಂದು ಯಾತ್ರೆ ನಡೆಯುವ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಪಕ್ಷವು 54 ಸೆಕೆಂಡುಗಳ ವೀಡಿಯೊವನ್ನು ಬಿಡುಗಡೆ ಮಾಡಿದೆ,. ಜನರು “ಜೈ ಶ್ರೀ ರಾಮ್” ಎಂದು ಕೂಗಿ ಪೋಸ್ಟರ್ ಗಳನ್ನು ಹರಿದುಹಾಕುವುದನ್ನು ಕಾಣಬಹುದು. ರಾಹುಲ್ ಗಾಂಧಿ ಮತ್ತು ಇತರ ಇಬ್ಬರು ಕಾಂಗ್ರೆಸ್ ನಾಯಕರ ಭಾವಚಿತ್ರವಿರುವ ಹೋರ್ಡಿಂಗ್ ಅನ್ನು ಇನ್ನೊಬ್ಬ ವ್ಯಕ್ತಿ ಕೆಳಗೆ ಎಳೆಯುತ್ತಿರುವುದನ್ನು ಈ ಕ್ಲಿಪ್ ತೋರಿಸುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಸ್ಸಾಂ ಕಾಂಗ್ರೆಸ್ ಘಟಕ, “ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಅಸ್ಸಾಂನಲ್ಲಿ ಸಾವಿರಾರು ಜನರನ್ನು ಆಕರ್ಷಿಸಿದೆ. ಇದನ್ನು ಸಹಿಸಲಾಗದೇ ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ಹರಿದುಹಾಕುತ್ತಿದ್ದಾರೆ” ಎಂದು ಹೇಳಿದೆ.