ಕಳೆದ ವರ್ಷವಂತೂ ಕೊರೊನಾ ದಾಳಿ, ರಾಷ್ಟ್ರಾದ್ಯಂತ ಲಾಕ್‍ಡೌನ್, ಬಳಿಕ ರಾಜ್ಯಗಳಲ್ಲಿ ಹಂತ ಹಂತವಾಗಿ ಲಾಕ್‍ಡೌನ್‍ನಿಂದ ಅಕ್ಟೋಬರ್‍ನಲ್ಲಿ ದುರ್ಗಾ ಪೂಜೆಯ ಸಂಭ್ರಮವು ಪಶ್ಚಿಮ ಬಂಗಾಳದಲ್ಲಿ ಕಳೆ ಕಟ್ಟಲೇ ಇಲ್ಲ. ಹೋಗಲಿ, ಈ ಬಾರಿ ಆದರೂ ದುರ್ಗೆಯು ನಗೆ ಬೀರಲು ಅವಕಾಶ ನೀಡುವಳೇ ಎಂದು ಕಾದು ಕುಳಿತ ದುರ್ಗೆಯ ವಿಗ್ರಹ ಮಾಡುವ ಕಾಯಕದ ಕುಶಲಕರ್ಮಿಗಳಿಗೆ ನಿರೀಕ್ಷಿತ ಫಲ ಸಿಕ್ಕಿಲ್ಲ.
ಕೊರೊನಾ ಎರಡನೇ ಅಲೆ ಮುಗಿಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ನಿರ್ಬಂಧಗಳ ನಡುವೆಯೇ ಬಂಗಾಳದ ಅಗ್ರ ಸಂಭ್ರಮಾಚರಣೆಗಳಲ್ಲಿ ಒಂದಾದ ದುರ್ಗಾಪೂಜೆ ನಡೆಸಲು ನಿರ್ಧರಿಸಿದೆ. ಹಾಗಾಗಿ ಕುಶಲಕರ್ಮಿಗಳು ಈ ಬಾರಿಯೂ ದುರ್ಗೆಯ ವಿಗ್ರಹಗಳ ಭರ್ಜರಿ ಆರ್ಡರ್‍ಗಳಿಲ್ಲದೆಯೇ ಸಪ್ಪೆ ಮುಖ ಹಾಕಿ ಕುಳಿತಿದ್ದಾರೆ. ಆ. 15ರ ಬಳಿಕ ದುರ್ಗೆ ವಿಗ್ರಹಗಳಿಗೆ ಪ್ರತಿಷ್ಠಿತ ಸಂಘ-ಸಂಸ್ಥೆಗಳಿಂದ ಆರ್ಡರ್ ಸಿಗುವ ಆಶಾಕಿರಣ ಕಾಣುತ್ತಿದೆ. ಈಗಾಗಲೇ ವಿಗ್ರಹ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಮಾರಾಟಗಾರರು ದುಪ್ಪಟ್ಟು ಬೆಲೆ ಹೇಳಿ, ತಮ್ಮ ಕಳೆದ ವರ್ಷದ ನಷ್ಟಗಳನ್ನು ಸರಿದೂಗಿಸಿಕೊಳ್ಳುತ್ತಿದ್ದಾರೆ.
ಮೂರು ತಿಂಗಳಲ್ಲಿ 55% ಕುಸಿತ ಕಂಡ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ
ನಮಗೆ ಆರ್ಡರ್ ಸಿಕ್ಕರೆ ಸಾಕಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗೆ ಉತ್ತರ ಕಲ್ಕತ್ತಾದ ಫೇಮಸ್ ಕುಮೊರ್‍ತುಲಿ ಪ್ರದೇಶದ ಕುಶಲಕರ್ಮಿ ಚೀನಾ ಪಾಲ್ ಹೇಳಿದ್ದಾರೆ.