
ಪ್ರತಿ ವರ್ಷ, ಕಾಜೋಲ್ ಮುಂಬೈನಲ್ಲಿ ತನ್ನ ಕುಟುಂಬದ ಜೊತೆ ಪೂಜೆಗೆ ಹಾಜರಾಗುತ್ತಿದ್ದರು. ಇದು ಈ ವರ್ಷವೂ ಭಿನ್ನವಾಗಿರಲಿಲ್ಲ. ಮಂಗಳವಾರದಂದು ಕಾಜೊಲ್ ಅವರು ಮಹಾ ಸಪ್ತಮಿಯಂದು ದುರ್ಗಾ ಪೂಜೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ತಮ್ಮ ಕುಟುಂಬದ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡ ಕಾಜೊಲ್ ಆಕೆಯ ಸೋದರ ಸಂಬಂಧಿ, ನಟಿ ಶರ್ಬಾನಿ ಮುಖರ್ಜಿ ಅವರನ್ನು ಭೇಟಿಯಾಗಿದ್ದಾರೆ. ಪೂಜೆಯಲ್ಲಿ ಕಾಜೋಲ್ ಪ್ರಕಾಶಮಾನವಾದ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸಾಂಪ್ರದಾಯಿಕ ಆಭರಣ ಹಾಗೂ ಹಣೆಗೆ ಬಿಂದಿ ಇಟ್ಟಿದ್ದಾರೆ. ಶರ್ಬನಿ ಮುಖರ್ಜಿಯವರು ಬೆರಗುಗೊಳಿಸುವ ಹಳದಿ ಸೀರೆ ಮತ್ತು ರೆಟ್ರೊ ಗ್ಲಾಸ್‌ನಲ್ಲಿ ಕಂಗೊಳಿಸಿದ್ದಾರೆ.
ನಟಿ ಕಾಜೋಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೂಜೆಯಲ್ಲಿ ಪಾಲ್ಗೊಂಡ ಕಾಜೊಲ್ ಕುಟುಂಬ ಸದಸ್ಯರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ.
https://www.instagram.com/p/CU61sO1MzvN/?utm_source=ig_embed&ig_rid=0169e29d-8f50-4d63-8e9e-102814ff217f
