ಚಲಿಸುತ್ತಿರುವ ಬೈಕ್ನಲ್ಲಿ ವ್ಯಕ್ತಿಯೊಬ್ಬ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಛತ್ತೀಸ್ಗಡ ಪೊಲೀಸರು, ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ.
ಜನನಿಬಿಡ ರಸ್ತೆಯಲ್ಲಿ ಬೈಕ್ನಲ್ಲಿ ಒಂದು ಬದಿ ಎರಡೂ ಕಾಲು ಹಾಕಿಕೊಂಡು ಶೋಕಿ ಮಾಡುತ್ತಾ ಸಾಗುತ್ತಿದ್ದ ವ್ಯಕ್ತಿಯ ವೀಡಿಯೊ ಜಾಲತಾಣದಲ್ಲಿ ವೆೈರಲ್ ಆದ ನಂತರ, ದುರ್ಗ ಪೊಲೀಸರು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೆೈಗೊಂಡರು.
ಆತನಿಗೆ 4,200 ರೂಪಾಯಿ ದಂಡ ವಿಧಿಸಲಾಗಿದ್ದು, ತಮ್ಮ ಕ್ರಮ ಏನೆಂಬುದನ್ನು ಆ ವಿಡಿಯೋ ಸಹಿತ ಜಾಲತಾಣದಲ್ಲಿ ಪೋಸ್ಟ್ ಮಾಡಿ ಇಂತಹ ಶೋಕಿ ಮಾಡುವ ಉಳಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಆತ ಹೆಲ್ಮೆಟ್ ಧರಿಸಿರಲಿಲ್ಲ ಮತ್ತು ರಸ್ತೆ ಸುರಕ್ಷತೆ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ಸ್ಟಂಟ್ಮೆನ್ಗಳು, ಮಾರ್ಪಡಿಸಿದ ಸೆೈಲೆನ್ಸರ್ಗಳನ್ನು ಬಳಸುವ ಜನರು ಮತ್ತು ರಾಶ್ ಡ್ರೈವರ್ಗಳ ವಿರುದ್ಧ ನಿರಂತರವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದು ದಯವಿಟ್ಟು ಟ್ರಾಫಿಕ್ ನಿಯಮಗಳನ್ನು ಅನುಸರಿಸಿ ಎಂದು ದುರ್ಗ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.