ನವದೆಹಲಿ : ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕೆ ವಿರಾಟ್ ಕೊಹ್ಲಿ ಗೈರಾಗಿದ್ದು, ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಸಮಾರಂಭದಲ್ಲಿ ಭಾಗವಹಿಸದ ಆಹ್ವಾನಿತರಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದರು.
ಹೈದರಾಬಾದ್ ನಲ್ಲಿ ಇಂಗ್ಲೆಂಡ್ ಟೆಸ್ಟ್ ಗೆ ಮುಂಚಿತವಾಗಿ ಭಾರತದ ತರಬೇತಿ ಶಿಬಿರ ನಡೆಯುತ್ತಿರುವ ಕಾರಣ ಕೊಹ್ಲಿ ಈ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದಾರೆ ಎಂದು ಆರಂಭಿಕ ವರದಿಗಳು ಸೂಚಿಸಿವೆ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಕೊಹ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವ ಸುದ್ದಿ ಬಂದ ಕೂಡಲೇ, ವೈಯಕ್ತಿಕ ಸಮಸ್ಯೆಗಳಿಂದಾಗಿ ಅವರು ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ ಎಂಬುದು ಸ್ಪಷ್ಟವಾಯಿತು.
‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ವೀಕ್ಷಿಸಲು ಕೊಹ್ಲಿ ಅಯೋಧ್ಯೆಗೆ ತಲುಪದಿದ್ದರೂ, ಡೂಪ್ಲಿಕೇಟ್ ಕೊಹ್ಲಿ ಆಗಮನವು ಅಭಿಮಾನಿಗಳಿಗೆ ಸಮಾಧಾನವನ್ನು ನೀಡಿತು. ಡುಪ್ಲಿಕೇಟ್ ಕೊಹ್ಲಿ. ಭಾರತದ ವೈಟ್ ಬಾಲ್ ಕ್ರಿಕೆಟ್ ಜರ್ಸಿಯನ್ನು ಧರಿಸಿದ್ದರು. ಪಿಯೂಷ್ ರೈ ಎಂಬುವವರು ಕೊಹ್ಲಿಯಂತೆ ಕಾಣಿಸಿಕೊಂಡು ಅಭಿಮಾನಿಗಳ ಗಮನ ಸೆಳೆದರು. ಮೊದಲು ವಿರಾಟ್ ಕೊಹ್ಲಿ ಅವರೇ ಬಂದರೂ ಎಂದು ಅಭಿಮಾನಿಗಳು ಅಂದುಕೊಂಡು ಅವರನ್ನು ಸುತ್ತುವರೆದು ಸೆಲ್ಪಿಗೆ ಮುಗಿಬಿದ್ದರು.