ಮರುಬಳಕೆಗೊಂಡ ನೂಲಿನಿಂದ ಹೊಸ ಶೂ ಮಾಡೆಲ್ ಒಂದನ್ನು ಉತ್ಪಾದಿಸಿರುವ ಕ್ರೀಡೋತ್ಪನ್ನಗಳ ದಿಗ್ಗಜ ನೈಕಿ ಈ ಶೂಗಳನ್ನು ಸುಲಭವಾಗಿ ಕಳಚಿ ಇಡಬಹುದಾಗಿದೆ ಎಂದು ತಿಳಿಸಿದೆ.
$180 (14,750 ರೂ.) ಬೆಲೆ ನಿಗದಿಪಡಿಸಲಾಗಿರುವ ಈ ಶೂಗಳನ್ನು ಮೊದಲ ನೋಟಕ್ಕೆ ನೋಡಿದಾಗ ಕಸದ ರಾಶಿಯಲ್ಲಿ ಚಿಂದಿಯಾಗಿ ಬಿದ್ದಿರುವಂತೆ ಕಾಣುತ್ತದೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಕೆಲವರು ಇದನ್ನು ”ಡಂಪ್ಸಟರ್ ಡಂಕ್ಸ್’, ’ನೈಕಿ ಏರ್‌ಸ್ಕ್ರಾಪ್ಸ್’, ’ಫುಟ್ ಫಂಗಸ್’ ಎಂದು ಕರೆದರೆ ಮತ್ತೆ ಕೆಲವರು ’ಧೂಮಪಾನಿಯ ಶ್ವಾಸಕೋಶ’ ಇದ್ದಂತಿದೆ ಎಂದಿದ್ದಾರೆ.
ಇದೇ ಶೂಗಳ ಕುರಿತಂತೆ ಸಕಾರಾತ್ಮಕದ ಪ್ರತಿಕ್ರಿಯೆಗಳು ಸಹ ಒಂದಷ್ಟು ಮಂದಿಯಿಂದ ವ್ಯಕ್ತವಾಗಿದೆ. “ನಾನು ಇದುವರೆಗೂ ಧರಿಸಿದ ಅತ್ಯಂತ ಆರಾಮದಾಯಕ ಶೂಗಳು,” ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ.
ISPA ಟ್ರೇನರ್‌ಗಳು ಎಂದು ಕರೆಯಲಾಗುವ ಈ ಶೂಗಳು ತಮ್ಮ ಹಗುರತೆ ಹಾಗೂ ಕಾಲುಗಳಿಗೆ ಗಾಳಿಯಾಡಲು ಅನುಕೂಲಕರವಾಗಿದೆ ಎಂದು ನೈಕಿ ತಿಳಿಸಿದೆ.