ನಟ ದುಲ್ಕರ್ ಸಲ್ಮಾನ್ ಮರ್ಸಿಡಿಸ್ ಎಎಂಜಿ ಜಿ63 ಎಸ್ಯುವಿ ಕಾರನ್ನು ಖರೀದಿ ಮಾಡಿದ್ದಾರೆ. 2.45 ಕೋಟಿ ಶೋರೂಂ ಬೆಲೆ ಇರುವ ಈ ಕಾರು ಜರ್ಮನ್ ಉತ್ಪಾದಕನ ಜಿ-ಸರಣಿಯ ಟಾಪ್ ಕಾರುಗಳಲ್ಲಿ ಒಂದಾಗಿದೆ.
ದೊಡ್ಡ ಕುಳಗಳಲ್ಲಿ ಭಾರೀ ಕ್ರೇಜ಼್ ಇರುವ ಈ ಕಾರಿನ ಖರೀದಿ ಸೆಲೆಬ್ರಿಟಿಗಳ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ನಿಂದ ಹೊಸ ದಾಖಲೆ
ಟರ್ಬೋ ಚಾರ್ಜ್ ಆಗಿರುವ ಅವಳಿ 4.0 ಲೀಟರ್ ವಿ-8 ಇಂಜಿನ್ ಜೊತೆಗೆ ಬರುವ ಈ ಕಾರು, 9-ಸ್ಪೀಡ್ ಸ್ವಯಂ ಚಾಲಿತ ಗೇರ್ಬಾಕ್ಸ್ ಹೊಂದಿದೆ. ಬಹಳ ಶಕ್ತಿಶಾಲಿ ಇಂಜಿನ್ ಹೊಂದಿರುವ ಈ ಕಾರಿಗೆ ಸೂಕ್ತವಾದ ಸಲಕರಣೆ ಅಳವಡಿಸಿದರೆ 2,950 ಕೆಜಿಯಷ್ಟು ತೂಕ ಎಳೆದೊಯ್ಯಬಲ್ಲದು.
ಕಾರಿನ ಕ್ಯಾಬಿನ್ನಲ್ಲಿ 12 ಇಂಜಿನ ಡಿಜಿಟಲ್ ಉಪಕರಣದ ಪ್ಯಾನಲ್, ಉತ್ಕೃಷ್ಟ ಗುಣಮಟ್ಟದ ಮೆಟಿರಿಯಲ್ಗಳು, ಕಪ್ಹೋಲ್ಡರ್, ಸರೌಂಡ್ ವ್ಯೂ ಕಾಮೆರಾ ಸೇರಿದಂತೆ ನವೀನ ಸವಲತ್ತುಗಳನ್ನು ಕೊಡಲಾಗಿದೆ. ಬಹಳಷ್ಟು ಜಾಗ ಇರುವ ಕಾರಣ ಉದ್ದನೆಯ ಮಂದಿಯೂ ಸಹ ಆರಾಮಾಗಿ ಕಾಲು ಚಾಚಿಕೊಂಡು ಕಾರಿನೊಳಗೆ ಕೂರಬಹುದಾಗಿದೆ.