alex Certify ಮತ್ತೊಂದು ದುಬಾರಿ ಕಾರ್ ಖರೀದಿಸಿದ ದುಲ್ಕರ್ ಸಲ್ಮಾನ್; ಹೊಸ ಕಾರ್ ನ ಬೆಲೆ ಎಷ್ಟು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ದುಬಾರಿ ಕಾರ್ ಖರೀದಿಸಿದ ದುಲ್ಕರ್ ಸಲ್ಮಾನ್; ಹೊಸ ಕಾರ್ ನ ಬೆಲೆ ಎಷ್ಟು ಗೊತ್ತಾ…..?

ಬಾಲಿವುಡ್ ನಟರಿಗೆ ಕಮ್ಮಿಯಿಲ್ಲ ಎಂಬುವಂತೆ ದುಬಾರಿ ಕಾರುಗಳನ್ನು ಹೊಂದಿರುವ ದಕ್ಷಿಣ ಭಾರತದ ಖ್ಯಾತ ನಟ ದುಲ್ಕರ್ ಸಲ್ಮಾನ್ ಮತ್ತೊಂದು ದುಬಾರಿ ಕಾರಿನ ಒಡೆಯರಾಗಿದ್ದಾರೆ. ಅವರು ತಮ್ಮ ಬಳಿ ಅನೇಕ ದುಬಾರಿ ಮತ್ತು ವಿಂಟೇಜ್ ಕಾರುಗಳ ಸಂಗ್ರಹವನ್ನು ಹೊಂದಿದ್ದು ಇತ್ತೀಚಿಗೆ
ಫೆರಾರಿ 296 GTB ಅನ್ನು ಖರೀದಿಸಿದ್ದಾರೆ. ಇತ್ತೀಚಿಗೆ ಈ ಹೊಸ ಕಾರ್ ಡ್ರೈವ್ ಮಾಡುತ್ತಾ ಕಾಣಿಸಿಕೊಂಡ ದುಲ್ಕರ್ ಸಲ್ಮಾನ್ ಕಾರ್ ಕ್ರೇಜ್ ಆಟೋಮೊಬೈಲ್ಸ್ ಮೇಲೆ ಪ್ರೀತಿ ಮತ್ತು ಆಸಕ್ತಿ ಹೊಂದಿರುವವರನ್ನು ಆಕರ್ಷಿಸಿತು.

ದುಲ್ಕರ್ ಹೊಸದಾಗಿ ಖರೀದಿಸಿದ ಫೆರಾರಿ 296 GTB 5.44 ಕೋಟಿ ರೂ.ಗಳ ಎಕ್ಸ್ ಶೋ ರೂಂ ಬೆಲೆಯನ್ನು ಹೊಂದಿದೆ. ಇದರ ಆನ್-ರೋಡ್ ಬೆಲೆಯು ಸುಮಾರು 6.25 ಕೋಟಿ ರೂಪಾಯಿವರೆಗೆ ಇರುತ್ತದೆ.

ಆರು-ಸಿಲಿಂಡರ್-ಎಂಜಿನ್‌ನ ಫೆರಾರಿ 296 GTB ಮಾದರಿಯು ಮಧ್ಯ-ಹಿಂಭಾಗದ ಎಂಜಿನ್‌ನ ಎರಡು-ಆಸನಗಳ ಬರ್ಲಿನೆಟ್ಟಾದ ಇತ್ತೀಚಿನ ವಿಕಾಸವಾಗಿದೆ. ಆರು ಸಿಲಿಂಡರ್‌ಗಳನ್ನು ಹೊಂದಿರುವ ಬ್ರ್ಯಾಂಡ್‌ನ ಮೊದಲ ಕಾರು ಕೂಡ ಇದಾಗಿದೆ.

296 GTB ಹೈಪರ್ ಕಾರಿನ ಹೃದಯಭಾಗದಲ್ಲಿ 3.0 ಲೀಟರ್ V6 ಎಂಜಿನ್ 645 bhp ಪವರ್ ಉತ್ಪಾದಿಸುತ್ತದೆ. ಈ ಫೆರಾರಿ ಸೂಪರ್ ಕಾರು ಹೆಚ್ಚುವರಿಯಾಗಿ 164 bhp ಎಲೆಕ್ಟ್ರಿಕ್ ಮೋಟಾರ್ ಅನ್ನು ಪಡೆದಿರುವುದರಿಂದ ಫೆರಾರಿ 296 GTB ಗರಿಷ್ಠ 809 bhp ಪವರ್ ಮತ್ತು 740 Nm ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೈಬ್ರಿಡ್ ಸ್ಪೋರ್ಟ್ಸ್ ಕಾರು ಕೇವಲ 2.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪುತ್ತದೆ. ಕಾರಿನ ಗರಿಷ್ಠ ವೇಗ ಗಂಟೆಗೆ 339 ಕಿ.ಮೀ ಎಂದು ಫೆರಾರಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...