ಇತ್ತೀಚಿನ ಕೆಲ ವರ್ಷಗಳಿಂದ ವಿವಾಹದಲ್ಲಿ ನೃತ್ಯ, ಮನೋರಂಜನೆ ಇರಲೇಬೇಕು ಎಂಬಂತಾಗಿದೆ. ಮದುವೆಯ ಸಮಯದಲ್ಲಿ ವಧು-ವರನಿಗಿಂತ ಅವರ ಕುಟುಂಬವು ಹೆಚ್ಚು ಮೋಜು-ಮಸ್ತಿ ಮಾಡುತ್ತಾರೆ. ಇಲ್ಲೊಂದೆಡೆ ಮದುವೆ ಕಾರ್ಯಕ್ರಮದಲ್ಲಿ ವರನ ಸಹೋದರಿಯೊಬ್ಬಳು ಮಾಡಿರುವ ನೃತ್ಯಕ್ಕೆ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವರನ ಸಹೋದರಿಯು, ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಅಭಿನಯದ ‘ಗುಡ್ ನ್ಯೂಸ್’ ಚಿತ್ರದ ‘ಸೌದ ಖಾರಾ ಖಾರಾ’ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾಳೆ. ವೇದಿಕೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ ಈಕೆಗೆ ಕುಟುಂಬ ಸದಸ್ಯರು ಹುರಿದುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸದ್ಯ, ಯುವತಿಯ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಈಕೆಯ ಡ್ಯಾನ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ.
https://www.youtube.com/watch?v=dnRe9rGWzf0