ಇತ್ತೀಚಿನ ದಿನಗಳಲ್ಲಿ ತಡ ರಾತ್ರಿಯವರೆಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಸುವ ಪುರುಷರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್ ನಿಂದ ಹೊರ ಬರುವ ನೀಲಿ ಲೈಟ್ ಪುರುಷರ ವೀರ್ಯದ ಮೇಲೆ ಪ್ರಭಾವ ಬೀರುತ್ತಿದೆ. ಇದು ವೀರ್ಯದ ಗುಣಮಟ್ಟವನ್ನು ಹಾಳು ಮಾಡ್ತಿದೆ.
ರಾತ್ರಿ ಗ್ಯಾಜೆಟ್ ಗಳಿಂದ ಬಿಡುಗಡೆಯಾಗುವ ಬೆಳಕು ಪುರುಷರ ವೀರ್ಯದ ಮೇಲೆ ಪ್ರಭಾವ ಬೀರುತ್ತಿದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಮೊಬೈಲ್ ಹಾಗೂ ಲ್ಯಾಪ್ ಟಾಪ್ ನಿಂದ ಹೊರ ಬರುವ ಬೆಳಕು ವೀರ್ಯದ ಗುಣಮಟ್ಟದ ಜೊತೆ ಬಿಡುಗಡೆ ಪ್ರಮಾಣದ ಮೇಲೂ ಪ್ರಭಾವ ಬೀರುತ್ತದೆ. ಮೊಬೈಲ್ ಸೇರಿದಂತೆ ಗ್ಯಾಜೆಟ್ ಕಡಿಮೆ ಬಳಸುವ ಹಾಗೂ ಉತ್ತಮ ನಿದ್ರೆ ಮಾಡುವ ಪುರುಷರ ವೀರ್ಯದ ಗುಣಮಟ್ಟ ಉತ್ತಮವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಗ್ಯಾಜೆಟ್ ಡಿಎನ್ಎ ಮೇಲೂ ಪ್ರಭಾವ ಬೀರಿದೆ.