ಹೊಟ್ಟೆಯುಬ್ಬರ ಸಮಸ್ಯೆಯಿಂದಾಗಿ ಹೊಟ್ಟೆಯಲ್ಲಿ ನೋವು, ಎದೆಯಲ್ಲಿ ಸುಡುವ ವೇದನೆ ಕಾಡುತ್ತದೆ. ಇದರಿಂದ ಹೊಟ್ಟೆ ಊದಿಕೊಳ್ಳುತ್ತದೆ ಮತ್ತು ಇದರಿಂದ ಕಿರಿಕಿರಿಯನ್ನು ಅನುಭವಿಸುತ್ತೀರಿ. ಈ ಹೊಟ್ಟೆಯುಬ್ಬರ ಸಮಸ್ಯೆ ಉಂಟಾಗಲು ಕೆಲವು ಕಾರಣಗಳಿವೆ. ಹಾಗಾಗಿ ಅದಕ್ಕೆ ಕಾರಣ ಮತ್ತು ಪರಿಹಾರ ತಿಳಿದುಕೊಳ್ಳಿ.
ಜೀರ್ಣಾಂಗ ವ್ಯವಸ್ಥೆಯಲ್ಲಿ ಆಮ್ಲದ ಕೊರತೆಯಾದಾಗ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ದೇಹಕ್ಕೆ ಪೋಷಕಾಂಶಗಳು ಸಿಗುವುದಿಲ್ಲ.
ಇದರಿಂದ ಹೊಟ್ಟೆಯುಬ್ಬರ ಸಮಸ್ಯೆ ಕಾಡುತ್ತದೆ. ಹೆಚ್ಚಿನ ಪ್ರಮಾಣದ ಸಕ್ಕರೆ ಸೇವನೆ, ಸತುವಿನ ಕೊರತೆ ಆಮ್ಲದ ಕೊರತೆಗೆ ಕಾರಣವಾಗಬಹುದು.
ಹಾಗೇ ನಿಯಮಿತವಾಗಿ ಮಲ ವಿಸರ್ಜನೆ ಮಾಡದಿದ್ದಾಗ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಮಲವನ್ನು ಮತ್ತಷ್ಟು ಹುದುಗಿಸುತ್ತವೆ. ಇದರಿಂದ ಅನಿಲ, ಹೊಟ್ಟೆಯುಬ್ಬರ ಸಮಸ್ಯೆ ಕಾಡುತ್ತದೆ.
ಹಾಗೇ ಡೈರಿ ಉತ್ಪನ್ನಗಳ ಅತಿಯಾದ ಸೇವನೆ, ಸಂಸ್ಕರಿಸಿದ ಆಹಾರ ಸೇವನೆ, ತಂಪು ಪಾನೀಯಗಳ ಸೇವನೆಯಿಂದ ಹೊಟ್ಟೆಯುಬ್ಬರ ಸಮಸ್ಯೆ ಕಾಡುತ್ತದೆಯಂತೆ.
ಈ ಹೊಟ್ಟೆಯುಬ್ಬರ ಸಮಸ್ಯೆಯನ್ನು ನಿವಾರಿಸಲು ಹೆಚ್ಚು ನೀರನ್ನು ಕುಡಿಯಬೇಡಿ. ಇದರಿಂದ ಆಮ್ಲ ದುರ್ಬಲಗೊಳ್ಳುತ್ತದೆ. ಹಾಗೇ ದೇಹದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಆಹಾರವನ್ನು ಸಂಪೂರ್ಣವಾಗಿ ಜಗಿದು ತಿನ್ನಿ, ಸಾಕಷ್ಟು ವಿಶ್ರಾಂತಿ ಪಡೆಯಿರಿ.