ಸ್ಮಾರ್ಟ್‌ಫೋನ್ ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗ. ಸ್ಮಾರ್ಟ್ ಫೋನ್‌ಗಳ ಮೇಲೆ ಜನರ ಅವಲಂಬನೆ ಬಹಳಷ್ಟು ಹೆಚ್ಚಾಗಿದೆ. ಶಾಪಿಂಗ್ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳಿಗೂ ನಾವು ಸ್ಮಾರ್ಟ್‌ಫೋನ್ ಬಳಸುತ್ತೇವೆ. ಆದ್ರೆ ಈ ಸ್ಮಾರ್ಟ್‌ಫೋನ್‌ಗಳ ಆಯಸ್ಸು 2-3 ವರ್ಷಗಳು ಮಾತ್ರ.
ನಾವು ಮಾಡುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳಿಂದಾಗಿ ಅವು ಇನ್ನೂ ಬೇಗ ಹಾಳಾಗಿ ಹೋಗುತ್ತವೆ. ಈ ತಪ್ಪುಗಳ ಬಗ್ಗೆ ತಿಳಿದುಕೊಂಡು ಮರೆತು ಕೂಡ ಅದನ್ನು ಪುನರಾವರ್ತಿಸಬೇಡಿ.
ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆ ಪ್ಲ್ಯಾಟ್‌ಫಾರ್ಮ್‌ಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಬೇಡಿ. ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಪ್ಲೇ ಸ್ಟೋರ್‌ನ ಪರಿಚಯವಿರುತ್ತದೆ. ಇಲ್ಲಿಂದ ನೀವು ಅಪ್ಲಿಕೇಶನ್ ಡೌನ್ಲೋಡ್ ಮಾಡುತ್ತೀರಿ. Google ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಾನೂನುಬದ್ಧವಾದ ಮತ್ತು ಸುರಕ್ಷಿತವಾದ ಅಪ್ಲಿಕೇಶನ್‌ಗಳಿಗೆ ಮಾತ್ರ ಸ್ಥಾನ ನೀಡುತ್ತದೆ.
ಹಾಗಾಗಿ ಪ್ಲೇ ಸ್ಟೋರ್‌ನಿಂದ ನಿರಾತಂಕವಾಗಿ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಬಹುದು. ಬೇರೆ ಬೇರೆ ಆ್ಯಪ್‌ಗಳು ಮಾಲ್‌ವೇರ್ ಮತ್ತು ವೈರಸ್‌ಗಳನ್ನು ಒಳಗೊಂಡಿರುತ್ತವೆ. ಅಲ್ಲಿ ನೀವು ಡೌನ್ಲೋಡ್ ಮಾಡಿಕೊಂಡ್ರೆ ನಿಮ್ಮ ಫೋನ್‌ಗೆ ಹಾನಿಯಾಗುತ್ತದೆ.
ಹಣ ಮತ್ತು ಡೇಟಾವನ್ನು ಉಳಿಸುವ ಸಲುವಾಗಿ ಕೆಲವರು ಉಚಿತ ವೈ-ಫೈಗಾಗಿ ಹುಡುಕುತ್ತಿರುತ್ತಾರೆ. ಎಲ್ಲಾದ್ರೂ ವೈಫೈ ಸಿಕ್ಕಿದ ತಕ್ಷಣ ಅದನ್ನು ಕನೆಕ್ಟ್ ಮಾಡಿಕೊಳ್ತಾರೆ. ಆದರೆ ಅದು ಸುರಕ್ಷಿತವಲ್ಲ. ಇದು ಕೂಡ ನಿಮ್ಮ ಫೋನ್‌ಗೆ ಸಮಸ್ಯೆ ಉಂಟುಮಾಡಬಹುದು.
ಪ್ರತಿ ಫೋನ್‌ನ ಚಾರ್ಜರ್ ವಿಭಿನ್ನವಾಗಿರುತ್ತದೆ. ಆದ್ರೆ ನಾವು ನಮ್ಮ ಫೋನ್‌ನ ಚಾರ್ಜರ್ ಮಾತ್ರವಲ್ಲದೆ ಬೇರೆ ಚಾರ್ಜರ್‌ಗಳಿಂದ್ಲೂ ಫೋನ್ ಅನ್ನು ಚಾರ್ಜ್ ಮಾಡುತ್ತೇವೆ. ಇದು ಫೋನ್‌ನ ಜೀವಿತಾವಧಿಯನ್ನೂ ಕಡಿಮೆ ಮಾಡುತ್ತದೆ.
ಅಪ್ಲಿಕೇಶನ್‌ಗಳನ್ನು ನವೀಕರಿಸುವುದರಿಂದ ಫೋನ್ ಮೆಮೊರಿ ಕಡಿಮೆಯಾಗುತ್ತದೆ ಎಂದು ಅನೇಕ ಬಳಕೆದಾರರು ಭಾವಿಸುತ್ತಾರೆ. ಹಳೆಯ ಆವೃತ್ತಿಯನ್ನೇ ಇಟ್ಟುಕೊಳ್ತಾರೆ. ಅಪ್ಲಿಕೇಶನ್ ನವೀಕರಣಗಳ ಬಗ್ಗೆ ನೋಟಿಫಿಕೇಶನ್ ಬಂದರೂ ನಿರ್ಲಕ್ಷಿಸುತ್ತಾರೆ.
ಈ ರೀತಿ ಮಾಡಿದ್ರೆ ಮೊಬೈಲ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಮೊಬೈಲ್ ಕಂಪನಿಗಳು ಮಾಡೆಲ್‌ಗಳನ್ನು ಕಾಲಕಾಲಕ್ಕೆ ನವೀಕರಿಸುತ್ತಲೇ ಇರುತ್ತವೆ. ಈ ಬಗ್ಗೆ ಮೊಬೈಲ್‌ನಲ್ಲಿ ನೋಟಿಫಿಕೇಶನ್ ಕೂಡ ಬರುತ್ತದೆ. ಆದರೆ ಹೆಚ್ಚಿನ ಬಳಕೆದಾರರು ಅದನ್ನು ನಿರ್ಲಕ್ಷಿಸುತ್ತಾರೆ ಮತ್ತು ಫೋನ್‌ನ ಇತ್ತೀಚಿನ ಆವೃತ್ತಿಯನ್ನು ಅಂದರೆ ನವೀಕರಿಸಿದ ಆಪರೇಟಿಂಗ್ ಸಿಸ್ಟಮ್ ಅನ್ನು ಇಟ್ಟುಕೊಳ್ಳುವುದಿಲ್ಲ. ಇದು ಕೂಡ ಸ್ಮಾರ್ಟ್‌ಫೋನ್‌ಗೆ ತೊಂದರೆ ಉಂಟುಮಾಡುತ್ತದೆ.