ಕೊರೊನಾ ಹಣದ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ದೊಡ್ಡ ಬದಲಾವಣೆ ತಂದಿದೆ. ಕೊರೊನಾ ಎರಡನೇ ಅಲೆ ಜನರಲ್ಲಿ ಭಯ ಹುಟ್ಟಿಸಿದೆ. ಇದರ ಪರಿಣಾಮವಾಗಿ ಜನರು ಎಟಿಎಂಗಳಿಂದ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಪ್ರಾರಂಭಿಸಿದ್ದಾರೆ.
ಪದೇ ಪದೇ ಎಟಿಎಂಗೆ ಹೋಗುವುದನ್ನು ತಪ್ಪಿಸಲು ಜನರು ಈ ರೀತಿ ಮಾಡ್ತಿದ್ದಾರೆ. ಎಟಿಎಂನಿಂದ ವಿತ್ ಡ್ರಾ ಮಾಡಿದ ಹಣವನ್ನು ತುರ್ತು ಸಂದರ್ಭಕ್ಕೆ ಬಳಕೆ ಮಾಡ್ತಿದ್ದಾರೆ. ಉಳಿದ ಪೇಮೆಂಟ್ ಗಳನ್ನು ಯುಪಿಐ ಅಥವಾ ಇತರ ವಿಧಾನಗಳ ಮೂಲಕ ಮಾಡ್ತಿದ್ದಾರೆ.
ಸರ್ವಾತ್ರ ಟೆಕ್ನಾಲಜೀಸ್ ಸಂಸ್ಥಾಪಕ ಮತ್ತು ಎಂಡಿ ಮಂದರ್ ಅಗಾಶೆ ಪ್ರಕಾರ, ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದ ನಿರ್ಬಂಧಗಳಿಂದಾಗಿ ಜನರು ಪದೇ ಪದೇ ಬ್ಯಾಂಕ್ ಮತ್ತು ಎಟಿಎಂಗಳಿಗೆ ಹೋಗುತ್ತಿರಲಿಲ್ಲ. ವೈದ್ಯಕೀಯ ತುರ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿದ್ದರು. ಆದ್ರೆ ಸಂಗ್ರಹಿಸಿಟ್ಟ ಹಣವನ್ನು ಬಳಕೆ ಮಾಡಿಲ್ಲ ಎಂದವರು ಹೇಳಿದ್ದಾರೆ.
ಸಾಮಾನ್ಯವಾಗಿ ಜನರು 2000-3000 ರೂಪಾಯಿಗಳನ್ನು ಈ ಹಿಂದೆ ವಿತ್ ಡ್ರಾ ಮಾಡ್ತಿದ್ದರು. ಈಗ ಈ ಪ್ರಮಾಣ ಶೇಕಡಾ 20ರಷ್ಟು ಹೆಚ್ಚಾಗಿದ್ದು 3000-4000 ರೂಪಾಯಿಗೆ ತಲುಪಿದೆ. ಮನೆಯಲ್ಲಿ ಹಣವಿದ್ರು ಸಣ್ಣ ಖರ್ಚುಗಳಿಗೆ ಯುಪಿಐ ಬಳಸಲಾಗುತ್ತಿದೆ ಎಂದು ಅಗಾಶೆ ಹೇಳಿದ್ದಾರೆ.