ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಸೋಮವಾರ ಒಟ್ಟು 10 ವಿಮಾನಗಳನ್ನು ಇತರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತಿಳಿಸಿದೆ.
ಮಾರ್ಗ ಬದಲಿಸಿದ 10 ವಿಮಾನಗಳ ಪೈಕಿ ಏಳು ವಿಮಾನಗಳನ್ನು ಜೈಪುರಕ್ಕೆ ಮತ್ತು ಮೂರನ್ನು ಲಕ್ನೋಗೆ ತಿರುಗಿಸಲಾಗಿದೆ.
ದೆಹಲಿಯಲ್ಲಿ(DEL) ಕೆಟ್ಟ ಹವಾಮಾನದಿಂದಾಗಿ(ಮಳೆ), ಎಲ್ಲಾ ವಿಮಾನಗಳ ನಿರ್ಗಮನ/ಆಗಮನ ಮೇಲೆ ಪರಿಣಾಮ ಬೀರಬಹುದು. ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ವಿನಂತಿಸಲಾಗಿದೆ ಎಂದು ಸ್ಪೈಸ್ ಜೆಟ್ ಹೇಳಿದೆ. IMD ಪ್ರಕಾರ, ದೆಹಲಿಯ ಎಲ್ಲಾ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದೆ.