ಕೊಲ್ಲಿ ದೇಶಗಳ ರಾಜಮನೆತನಗಳ ಮಂದಿ ತಮ್ಮ ದುಡ್ಡಿನ ಮದದಿಂದ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ದಿನಬೆಳಗಾದರೆ ಓದುತ್ತಲೇ ಇರುತ್ತೇವೆ.
ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ, ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್ ಅವರು ಬ್ರಿಟನ್‌ನಲ್ಲಿರುವ ತಮ್ಮ ಮಾಜಿ ಪತ್ನಿಯ ಎಸ್ಟೇಟ್ ಬಳಿಯೇ ಆಸ್ತಿಯೊಂದನ್ನು ಖರೀದಿಸಲು ನೋಡಿದ್ದಾರೆ.
ತಲೆದಿಂಬಿಲ್ಲದೆ ಮಲಗಿದರೆ ದೇಹದಲ್ಲಾಗುತ್ತೆ ಅಚ್ಚರಿಯ ಬದಲಾವಣೆ
ಇದೊಂದು ಉದ್ದೇಶಪೂರಿತ ಕೃತ್ಯವಾಗಿದ್ದು, ತಮ್ಮ ಮಾಜಿ ಪತ್ನಿಯನ್ನು ಬೆದರಿಸಲು ಶೇಖ್ ಹೀಗೆ ಮಾಡಿದ್ದಾರೆ ಎಂದು ಬ್ರಿಟನ್ ನ ಹಿರಿಯ ನ್ಯಾಯಾಧೀಶರು ಹೇಳಿದ್ದಾರೆ.
30 ದಶಲಕ್ಷ ಪೌಂಡ್ ಮೌಲ್ಯದ ಪಾರ್ಕ್‌ವುಡ್ ಎಸ್ಟೇಟ್ ಅನ್ನು ದುಬೈ ಸುಲ್ತಾನರಿಗಾಗಿ ಖರೀದಿ ಮಾಡಲು ರಿಯಲ್ ಎಸ್ಟೇಟ್ ಏಜೆಂಟರು ಕೆಲವೇ ವಾರಗಳಲ್ಲಿ ಕೆಲಸ ಮುಗಿಸುವುದರಲ್ಲಿದ್ದರು. ಆದರೆ ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿದ ಅವರ ತಂಡ ಎಸ್ಟೇಟ್ ಖರೀದಿ ನಿರ್ಧಾರದಿಂದ ಹಿಂದೆ ಸರಿದಿದೆ.
ಸೋತು ಗೆದ್ದ ದೀಪಕ್ ಚಹರ್….! ಮೈದಾನದಲ್ಲೇ ಗೆಳತಿಗೆ ಪ್ರೇಮ ನಿವೇದನೆ
ಶೇಖ್ ಮಾಜಿ ಪತ್ನಿಯಾದ ಜೋರ್ಡಾನ್‌ನ ಯುವರಾಣಿಯಾದ ಹಯಾ ಬಿನ್ ಅಲ್-ಹುಸೇನ್ ಈ ಸಂಬಂಧ ಲಂಡನ್ ಹೈಕೋರ್ಟ್‌ನಲ್ಲಿ ದನಿಯೆತ್ತಿದ್ದಾರೆ.
“ಈ ಆಸ್ತಿ ಖರೀದಿ ಭೀತಿ ಮೂಡಿಸಲು ಮಾಡಿದ್ದಾಗಿದೆ. ಹಯಾ ಇಂಗ್ಲೆಂಡ್‌ಗೆ ಬಂದಾಗಿನಿಂದಲೂ ಅರಬ್ ಸುಲ್ತಾನ ಆಕೆಗೆ ಭೀತಿ ಮೂಡಿಸುವ ಅನೇಕ ಕೃತ್ಯಗಳನ್ನು ಮಾಡುತ್ತಾ ಬಂದಿದ್ದಾರೆ,” ಎಂದು ಇಂಗ್ಲೆಂಡ್ ಮತ್ತು ವೇಲ್ಸ್‌ನ ಕೌಟುಂಬಿಕ ವಿಭಾಗದ ಅಧ್ಯಕ್ಷರಾದ ನ್ಯಾಯಾಧೀಶ ಆಂಡ್ರ‍್ಯೂ ಮ್ಯಾಕ್‌ಫಾರ್ಲೇನ್ ಹೇಳಿದ್ದರು.
ರಾಜ್ಯದ ಜನತೆಗೆ ಗುಡ್ ನ್ಯೂಸ್: ಉಚಿತ ಚಿಕಿತ್ಸೆ ಸೌಲಭ್ಯದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಮರು ಜಾರಿ ಸಾಧ್ಯತೆ
ತನ್ನ ಹಾಗೂ ತನ್ನ ವಕೀಲರ ಫೋನ್‌ಗಳನ್ನು ಕದ್ದಾಲಿಸುತ್ತಿರುವ ಶೇಖ್, ತನ್ನ ಮೇಲೆ ಗೂಢಾಚಾರಿಕೆ ಮಾಡುತ್ತಿದ್ದು, ತನ್ನ ಮಕ್ಕಳನ್ನು ಅಪಹರಿಸಲು ಯತ್ನಿಸಬಹುದು ಎಂಬ ಭೀತಿ ವ್ಯಕ್ತಪಡಿಸಿರುವ ಹಯಾ, “ನನ್ನ ಮೇಲೆ ಯಾರೋ ಕಣ್ಣಿಟ್ಟಿದ್ದಾರೆ ಎನಿಸುತ್ತಿದೆ….. ಶೇಖ್ ಮೊಹಮ್ಮದ್ ಹಾಗೂ ಆತನ ಪರವಾಗಿ ಕ್ಯಾಸಲ್‌ವುಡ್ ಬಳಿ ಆಸ್ತಿ ಖರೀದಿಗಳು ಭಯ ಹುಟ್ಟಿಸುತ್ತಿದ್ದು, ಭಾರೀ ಕಿರಿಕಿರಿ ನೀಡುತ್ತಿದೆ,” ಎಂದು ಯುವರಾಣಿ ಕೋರ್ಟ್‌ಗೆ ಕೊಟ್ಟ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.