ದುಬೈ: ಜಾಗತಿಕ ಹವಾಮಾನ ಬದಲಾವಣೆ, ಮೋಡ ಬಿತ್ತನೆಯ ಸೈಡ್ ಎಫೆಕ್ಟ್ ನಿಂದ ಮಧ್ಯಪ್ರಾಚ್ಯದ ಪ್ರಮುಖ ಆರ್ಥಿಕ ಕೇಂದ್ರ ದುಬೈ ಸಂಪೂರ್ಣ ಮುಳುಗಡೆಯಾಗಿದೆ. ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ವಿಮಾನ ಸಂಚಾರ ಸಂಪೂರ್ಣ ಅಸ್ತವಸ್ತಗೊಂಡಿದೆ.
ಐಷಾರಾಮಿ ಕಾರ್ ಗಳು, ವಾಹನಗಳು ನದಿಯಂತಾದ ರಸ್ತೆಗಳಲ್ಲೇ ಮುಳುಗಿಹೋಗಿವೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೆರೆಯ ರೀತಿಯಲ್ಲಿ ಮಾರ್ಪಟ್ಟಿದೆ. ಪ್ರತಿಷ್ಠಿತ ಮಾಲ್ ಗಳು, ಮೆಟ್ರೋ ನಿಲ್ದಾಣಗಳಲ್ಲಿ ಐದಾರು ಅಡಿಯಷ್ಟು ನೀರು ನಿಂತಿದೆ.
ಅರಬ್ ರಾಷ್ಟ್ರಗಳು ಪ್ರವಾಹಕ್ಕೆ ತತ್ತರಿಸಿ ಹೋಗಿವೆ. ದುಬೈ ಆಚೆಗೂ ಚಂಡಮಾರುತ ಪ್ರಭಾವ ವಿಸ್ತರಿಸಿದೆ. ಬಹರೇನ್ ಸೇರಿದಂತೆ ಅರಬ್ ಸುತ್ತಲಿನ ರಾಷ್ಟ್ರಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಓಮನ್, ಕತಾರ್, ಸೌದಿ ಅರೇಬಿಯಾದಲ್ಲಿ ಭಾರಿ ಮಳೆಯಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಮನೆಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಸೂಚಿಸಲಾಗಿದೆ. ಚಂಡಮಾರುತ ಕಾರಣ ದುಬೈಗೆ ಬರುವ ಮತ್ತು ಹೋಗುವ ಸುಮಾರು 500ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ.