ಶ್ರೇಯಸ್ ಪಿ.ಬಿ. ನಿರ್ದೇಶಿಸಿರುವ ‘ಡ್ಯುಯಲ್ ಸಿಮ್’ ಎಂಬ ಕಿರುಚಿತ್ರ ನಿನ್ನೆಯಷ್ಟೇ youtube ನಲ್ಲಿ ರಿಲೀಸ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರ ಗಮನ ಸೆಳೆದಿದೆ. ಹೊಸ ಪ್ರತಿಭೆಗಳ ಈ ಪ್ರಯತ್ನಕ್ಕೆ ಮೆಚ್ಚುಗೆಯ ಸುರಿಮಳೆ ಹರಿದು ಬಂದಿದೆ.
ಈ ಶಾರ್ಟ್ ಫಿಲಂ ಅನ್ನು ಎಸ್ಆರ್ ಮೂವೀಸ್ ಬ್ಯಾನರ್ ನಲ್ಲಿ ಸಿದ್ದರಾಜು ಕೆ.ಎನ್. ನಿರ್ಮಾಣ ಮಾಡಿದ್ದು, ಜ್ಞಾನೇಂದ್ರ ಸೇರಿದಂತೆ ರಾಜಲಕ್ಷ್ಮಿ, ಚಿತ್ರ, ಅರ್ಜುನ್, ವಿನಯ್ ಗೌಡ ಅಭಿನಯಿಸಿದ್ದಾರೆ. ಗಗನ್ ಮತ್ತು ಶ್ರೇಯಸ್ ಪಿ.ಬಿ. ಅವರ ಸಂಗೀತ ನಿರ್ದೇಶನವಿದ್ದು, ದರ್ಶನ್ ಕೆ.ಎನ್. ಸಂಕಲನ, ಶ್ರೇಯಸ್ ಪಿ.ಬಿ. ಹಾಗೂ ದರ್ಶನ್ ಕೆ.ಎನ್. ಛಾಯಾಗ್ರಾಹಣವಿದೆ.