ಬ್ರಿಟಿಷ್ ಆಲ್ಬೇನಿಯಾದ ಪಾಪ್ ಸ್ಟಾರ್ ಡುವಾ ಲಿಪಾ ಪಾಪ್ ಗಾಯನದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಕೆಗೆ ಇರಿಸುಮುರಿಸು ಉಂಟು ಮಾಡುವಂತಹ ಘಟನೆ ನಡೆದಿದೆ.
ಸಂಗೀತ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದ ವಿಡಿಯೋ ತುಣುಕೊಂದು ಆಕೆಗೆ ನೋವು ತಂದಿದೆ. ಈ ತುಣುಕು ಟ್ವಿಟ್ಟರ್ ನಲ್ಲಿ ಹರಿದಾಡಿದ್ದು, ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಇದೊಂದು ಸಾಮಾನ್ಯ ನೃತ್ಯವಾಗಿದೆ ಎಂದೆಲ್ಲಾ ಟೀಕಿಸಿದ್ದರು. ಇದರಿಂದ ಬೇಸತ್ತ ಲಿಪಾ ಟ್ವಿಟ್ಟರ್ ಅನ್ನೇ ತೊರೆದಿದ್ದಾರೆ.
ಶಾಸಕ ಮಾವನ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ ಸೊಸೆ
ಏಳು ವರ್ಷದಿಂದ ಪಾಪ್ ಗಾಯನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುವ ಲಿಪಾ ಸಂಗೀತ ಕಾರ್ಯಕ್ರಮವೊಂದರಲ್ಲಿ ನಾನು ನೃತ್ಯ ಮಾಡಿದ್ದೆ. ಅದರ ವಿಡಿಯೋದ ಸಣ್ಣ ತುಣುಕೊಂದನ್ನು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಡಲಾಗಿದೆ ಮತ್ತು ಈ ಬಗ್ಗೆ ಟೀಕೆಗಳನ್ನು ಮಾಡಲಾಗುತ್ತಿದೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಆ ಒಂದು ತುಣುಕಿನ ವಿಡಿಯೋವನ್ನೇ ಆಧಾರವಾಗಿಟ್ಟುಕೊಂಡು ನನ್ನ ಇಡೀ ಸಾಧನೆಯನ್ನು ಅಳೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾಳೆ ಲಿಪಾ.