ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನಲ್ಲಿ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಗಿರುವ ತನ್ನ ತಂದೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಸೆಲ್ಯೂಟ್ ಮಾಡುವ ಹೃದಯಸ್ಪರ್ಶಿ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಯುಪಿ ಪೊಲೀಸ್ನ ಡಿಎಸ್ಪಿಯಾಗಿ ನೇಮಕಗೊಂಡಿರುವ ಅಪೇಕ್ಷಾ ನಿಂಬಾಡಿಯಾ ಅವರು ಐಟಿಬಿಪಿಯಲ್ಲಿ ಡಿಐಜಿಯಾಗಿ ಸೇವೆ ಸಲ್ಲಿಸುತ್ತಿರುವ ತನ್ನ ತಂದೆ ಎಪಿಎಸ್ ನಿಂಬಾಡಿಯಾ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಅಪೇಕ್ಷಾ ತನ್ನ ಪರೇಡ್ನಲ್ಲಿ ಭಾಗವಹಿಸಿದ ನಂತರ ಸೆಲ್ಯೂಟ್ ಕೊಟ್ಟಿದ್ದು, ಈ ಕ್ಷಣವನ್ನು ಸೆರೆಹಿಡಿಯಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದ್ದು, 17,000ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿವೆ. ಇದೊಂದು ಹೆಮ್ಮೆಯ ಕ್ಷಣ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಜನವರಿಯಲ್ಲಿ ಆಂಧ್ರಪ್ರದೇಶದಲ್ಲೂ ಇದೇ ರೀತಿಯ ಫೋಟೋ ಆನ್ಲೈನ್ನಲ್ಲಿ ವೈರಲ್ ಆಗಿತ್ತು. ಸರ್ಕಲ್ ಇನ್ಸ್ಪೆಕ್ಟರ್ ವೈ ಶ್ಯಾಮ್ ಸುಂದರ್ ಅವರು ಪುತ್ರಿ, ಡಿಎಸ್ಪಿ ಯೆಂಡ್ಲೂರು ಜೆಸ್ಸಿ ಪ್ರಶಾಂತಿ ಅವರಿಗೆ ವಂದನೆ ಸಲ್ಲಿಸುತ್ತಿರುವ ಫೋಟೋ ವೈರಲ್ ಆಗಿತ್ತು.