ಕಡುಬು, ಮೋದಕ ಗಣೇಶನಿಗೆ ಅತ್ಯಂತ ಪ್ರೀತಿಯ ತಿನಿಸು. ಈ ಬಾರಿ ಗಣೇಶನಿಗೆ ಅರ್ಪಿಸಿ ಒಣ ಹಣ್ಣುಗಳು ಕಡುಬು. ಇದನ್ನ ತಯಾರಿಸೋದಂತೂ ಬಹಳ ಸುಲಭ. ಹೇಗೆ ಅಂತೀರಾ? ಇಲ್ಲಿದೆ ಸಾಮಗ್ರಿ ಹಾಗೂ ವಿಧಾನ.
ಒಣ ಖರ್ಜೂರ – 50 ಗ್ರಾಂ
ಬಾದಾಮಿ – 50 ಗ್ರಾಂ
ಗೋಡಂಬಿ -50 ಗ್ರಾಂ
ಅಂಜೂರ – 4-5
ಅಕ್ರೂಟ್ – 50 ಗ್ರಾಂ
ಪಿಸ್ತಾ -25 ಗ್ರಾಂ
ಏಲಕ್ಕಿ – 8-10
ತುರಿದಒಣ ಕೊಬ್ಬರಿ – ಅರ್ಧ ಬಟ್ಟಲು
ಹುರಿಗಡಲೆ – ಒಂದು ಹಿಡಿ
ಬೆಲ್ಲ ಅಥವಾ ಸಕ್ಕರೆ – ಅರ್ಧ ಕೆಜಿ
ತಯಾರಿಸುವ ವಿಧಾನ
ಒಣ ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ, ತುಪ್ಪದಲ್ಲಿ ಒಂದೆರಡು ನಿಮಿಷ ಹುರಿಯಿರಿ. ಒಣಕೊಬ್ಬರಿ ಮತ್ತು ಏಲಕ್ಕಿ ಸಹಾ ಸ್ವಲ್ಪ ಬೆಚ್ಚಗಾಗುವವರೆಗೂ ಹುರಿಯಿರಿ. ಈಗ ಮೇಲೆ ಹೇಳಿದ ಎಲ್ಲ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಪುಡಿ ಮಾಡಿದ ಬೆಲ್ಲ ಅಥವಾ ಸಕ್ಕರೆ ಸೇರಿಸಿ ಹೂರಣ ಸಿದ್ಧಪಡಿಸಿಕೊಳ್ಳಿ.
ಮೈದಾ ಹಾಗೂ ಚಿರೋಟಿ ರವೆ ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿದ ಹಿಟ್ಟನ್ನು ಹಾಳೆಗಳಾಗಿ ಲಟ್ಟಿಸಿದ ನಂತರ ಈಗಾಗಲೇ ಸಿದಾಪಡಿಸಿರುವ ಒಣ ಹಣ್ಣುಗಳ ಹೂರಣವನ್ನು ತುಂಬಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗಣಪನಿಗೆ ಒಣಹಣ್ಣುಗಳ ಕಡುಬು ಸಮರ್ಪಿಸಿ.