ನವದೆಹಲಿ : ಮದ್ಯದ ಅಮಲಿನಲ್ಲಿ ಕರ್ತವ್ಯಕ್ಕೆ ತೆರಳಿದ್ದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧರೊಂದಿಗೆ ಮಹಿಳೆಯೊಬ್ಬರು ಅನುಚಿತವಾಗಿ ವರ್ತಿಸಿ ವಾಗ್ವಾದ ನಡೆಸಿದ ಘಟನೆ ನಡೆದಿದೆ. ದೆಹಲಿಯ ಹೆದ್ದಾರಿಯ ಮಧ್ಯದಲ್ಲಿ ಮಹಿಳೆ ಮತ್ತು ಐಟಿಬಿಪಿ ಜವಾನರ ನಡುವೆ ವಾಗ್ವಾದ ಭುಗಿಲೆದ್ದಿದೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ಮಹಿಳೆ ತನ್ನ ಕಾರನ್ನು ಜವಾನರ ಬಸ್ ಮುಂದೆ ಪದೇ ಪದೇ ನಿಲ್ಲಿಸಿ ಚಾಲನೆಗೆ ಅಡ್ಡಿಪಡಿಸಿದಳು. ಮಹಿಳೆ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಐಟಿಬಿಪಿ ಜವಾನರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆ ಬಿಳಿ ಬಣ್ಣದ ಹ್ಯುಂಡೈ ಕ್ರೆಟಾವನ್ನು ಓಡಿಸುತ್ತಿರುವುದನ್ನು ಕಾಣಬಹುದು. ಟ್ರಾಫಿಕ್ ಜಾಮ್ ನಡುವೆ ಐಟಿಬಿಪಿ ಜವಾನರು ತಮ್ಮ ಬಸ್ ಅನ್ನು ರಸ್ತೆಯ ಬದಿಯಲ್ಲಿ ತಮ್ಮ ವಾಹನದ ಹಿಂದೆ ನಿಲ್ಲಿಸಿರುವುದನ್ನು ಕಾಣಬಹುದು.
दिल्ली में एक महिला ने DUTY जा रहे ITBP के जवानों को परेशान किया !
अपनी गाड़ी को जवानों की गाड़ी के आगे बार बार लगाया, और गाड़ी चलाने में व्यवधान पैदा किया , महिला ने ड्रिंक भी किया हुआ था ।
इन महिला के खिलाफ सख्त कार्यवाही होनी चाहिए ll pic.twitter.com/vSyBWsfygJ
— PARAMILITARY HELP – CAPF (@Paramilitryhelp) March 5, 2025