ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಎದುರಲ್ಲೇ ಶಿಕ್ಷಕನೊಬ್ಬ ಮದ್ಯ ಸೇವಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳ ಎದುರಲ್ಲಿ ಕುಳಿತ ಶಿಕ್ಷಕನ ಪಾದನ ಬಳಿ ಖಾಲಿ ಮದ್ಯದ ಬಾಟಲಿ ಕಂಡುಬಂದಿದೆ. ಮತ್ತೊಂದು ಬಾಟಲಿಯನ್ನು ವಿಡಿಯೋ ಚಿತ್ರೀಕರಿಸುವಾಗ ಶಿಕ್ಷಕ ಮರೆಮಾಚಲು ಯತ್ನಿಸಿದ್ದಾನೆ.
ಉತ್ತರ ಪ್ರದೇಶದ ಹತ್ರಾಸ್ ಶಾಲೆಯೊಂದರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ತಪ್ಪಿತಸ್ಥ ಶಿಕ್ಷಕನ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಮಾಹಿತಿ ಕಚೇರಿ ತಿಳಿಸಿದೆ.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಅತಿಯಾಗಿ ಮದ್ಯ ಸೇವಿಸಿದ ಮೇಷ್ಟ್ರು ಹುಡುಗಿಯರಿಗೆ ಪಾಠ ಮಾಡುತ್ತಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರು ಈ ರೀತಿ ನಡೆದುಕೊಂಡರೆ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆಯೇ? ಕೂಡಲೇ ಈ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.