alex Certify Watch Video | ಎಣ್ಣೆ ಏಟಿನಲ್ಲಿ ಕರಡಿ ಬೆನ್ನೇರಿದ ಮಹಾನುಭಾವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಎಣ್ಣೆ ಏಟಿನಲ್ಲಿ ಕರಡಿ ಬೆನ್ನೇರಿದ ಮಹಾನುಭಾವ

ರೊಚ್ಚಿಗೆದ್ದು ಒಂದೇ ಒಂದು ಪೆಗ್ ಒಳಗೆ ಹೋದರೆ ಸಾಕು ಕುಡುಕರ ಅಸಲಿ ಆಟ ಶುರುವಾಗುತ್ತೆ. ಇಡೀ ಜಗತ್ತು ಅವರು ಹೇಳಿದಂತೆ ಕೇಳುತ್ತೆ ಅನ್ನೋ ಭ್ರಮೆ ಅವರಲ್ಲಿರುತ್ತೆ. ಇದೇ ರೀತಿ ಕುಡಿದು ಕಿಕ್ ಏರಿಸಿಕೊಂಡಿದ್ದ ಕುಡುಕ ಮಹಾಶಯ ಮಾಡಿದ್ದ ಕಿತಾಪತಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ನೋಡಿದವರೆಲ್ಲ ಈ ಮಹಾನುಭಾವನ ಗಟ್ಟಿಗುಂಡಿಗೆಯನ್ನ ಹಾಡಿಹೊಗಳೋರೆ. ಏನ್ ಧೈರ್ಯ, ಅಬ್ಬಬ್ಬಬ್ಬಾ ಮೆಚ್ಚಬೇಕು ಅಂತ ಹೊಗಳೇ ಹೊಗಳಿದ್ದಾರೆ. ಅಸಲಿಗೆ ಈ ವಿಡಿಯೋದಲ್ಲಿ ಏನಿದೆ ಅಂತ ಒಮ್ಮೆ ನೋಡಿ.

ಇಲ್ಲಿ ಕೆರಳಿ ರೊಚ್ಚಿಗೆದ್ದ ಕರಡಿ ಬೆನ್ನ ಮೇಲೆ, ವ್ಯಕ್ತಿಯೊಬ್ಬ ಕೂತು ಎಂಜಾಯ್ ಮಾಡ್ತಿದ್ದಾನೆ. ಕರಡಿಯನ್ನ ಮುಟ್ಟಲು ಜನ ಹೆದರುತ್ತಿದ್ದರೆ ಇಲ್ಲಿ ಕರಡಿ ಮೇಲೆ ಕೂತು, ಅದನ್ನ ತಾನೇ ತಾಳಕ್ಕೆ ತಕ್ಕಂತೆ ಕುಣಿಸ್ತಾ ಇದ್ದೇನೆ ಅನ್ನೊ ಭ್ರಮೆಯಲ್ಲಿ ಈ ಮಹಾಶಯ ಇದ್ದಾನೆ.

ಅಸಲಿಗೆ ಈ ವೀಡಿಯೊದಲ್ಲಿ ವ್ಯಕ್ತಿಯು ಸಂಪೂರ್ಣವಾಗಿ ಕುಡಿದು, ಒಂದು ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ವೋಡ್ಕಾ ಬಾಟಲ್ ಹಿಡಿದಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ಕುಡಿದ ಅಮಲಿನಲ್ಲಿದ್ದ ಆತ ಅಲಾಸ್ಕಾದಲ್ಲಿ ಕಂಡುಬರುವ ದೈತ್ಯ ಗ್ರಿಜಿ ಕರಡಿಯ ಬೆನ್ನಿನ ಮೇಲೆ ಕುಳಿತಿದ್ದಾನೆ. ಇದು ನಿಜಕ್ಕೂ ಅಪಾಯಕಾರಿಯಾಗಿದೆ. ಅಲ್ಲದೆ, ಆ ಸಮಯದಲ್ಲಿ ಕರಡಿ ತುಂಬಾ ಕೋಪಗೊಂಡಿತ್ತು.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು 1.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 44 ಸಾವಿರಕ್ಕೂ ಹೆಚ್ಚು ಬಳಕೆದಾರರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ಬಗ್ಗೆ ನೆಟಿಜನ್‌ಗಳು ನಾನಾ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ. ಆದ್ರೆ ಕುಡಿದ ಮತ್ತಿನಲ್ಲಿ ಜೀವ ಕಳೆದುಕೊಳ್ಳುವ ಆಟ ಏಕೆ ಅಲ್ವಾ.. ಈ ರೀತಿ ನೀವು ಮಾಡೋ ಮುನ್ನ ಹುಷಾರ್

— why women's live longer than men (@TWWLLTM) March 11, 2023

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...