
ರಾಯ್ ಪುರ: ಛತ್ತೀಸ್‌ಗಢದ ರಾಯ್ ಪುರದಲ್ಲಿ ಮೂವರು ಪುರುಷರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಪತಿಯನ್ನು ಥಳಿಸಿದ್ದಾರೆ.
ಆರೋಪಿಗಳು ಕೆಲಸ ಕೊಡಿಸುವ ಭರವಸೆಯೊಂದಿಗೆ ದಂಪತಿಗಳಿಗೆ ಆಮಿಷವೊಡ್ಡಿದ್ದ ಅವರು ಮೊದಲಿಗೆ ಗಂಡನನ್ನು ಥಳಿಸಿ ನಂತರ ಮಹಿಳೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಆಗಸ್ಟ್ 12 ರಂದು ನಡೆದಿದೆ.
ದಂಪತಿ ಕೆಲಸ ಹುಡುಕಿಕೊಂಡು ಜಂಜಗಿರ್ ಚಂಪಾದಿಂದ ರಾಯ್ ಪುರಕ್ಕೆ ಹೋಗಿದ್ದರು. ಆಗಸ್ಟ್ 12 ರಂದು ರಾಯ್ ಪುರವನ್ನು ತಲುಪಿದ್ದ ಅವರು ತಮ್ಮ ಪ್ರಯಾಣದಿಂದ ದಣಿದಿದ್ದರಿಂದ ದೇವಸ್ಥಾನದಲ್ಲಿ ತಂಗಿದ್ದಾರೆ. ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರುವ ಉದ್ದೇಶದಿಂದ ಅವರು ಬಂದಿದ್ದರು.
ರಾಜೇಶ್, ಮುಖೇಶ್ ಸಾಹು ಮತ್ತು ಸಂತೋಷ್ ಬೆಲ್ದಾರ್ ಎಂಬುವವರು ಮದ್ಯ ಸೇವಿಸಿ ದೇವಾಲಯ ಬಳಿ ಬಂದಿದ್ದಾರೆ. ದಂಪತಿಯನ್ನು ನೋಡಿ ಅವರೊಂದಿಗೆ ಮಾತನಾಡಿ ಬಂದ ಉದ್ದೇಶದ ಬಗ್ಗೆ ವಿಚಾರಿಸಿದ್ದಾರೆ. ಪತಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಆತನನ್ನು ತಮ್ಮ ಪಿಕ್ ಅಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಏಕಾಂತ ಸ್ಥಳದಲ್ಲಿ ವಾಹನ ನಿಲ್ಲಿಸಿ ಅಲ್ಲಿ ಮಹಿಳೆಯ ಪತಿಯನ್ನು ಥಳಿಸಿ, ಆತನ ಫೋನ್ ಕಸಿದುಕೊಂಡು ಅಲ್ಲೇ ಬಿಟ್ಟು ತೆರಳಿದ್ದಾರೆ. ನಂತರ ಮೂವರು ಮಹಿಳೆ ಕಾಯುತ್ತಿದ್ದ ಸ್ಥಳಕ್ಕೆ ಮರಳಿ ಪತಿ ಕರೆಯುತ್ತಿದ್ದಾನೆ ಬನ್ನಿ ಎಂದು ಕರೆದುಕೊಂಡು ಹೊರಟಿದ್ದಾರೆ. ಆರೋಪಿಗಳ ಉದ್ದೇಶವನ್ನು ಅನುಮಾನಿಸದ ಮಹಿಳೆ ಅವರ ಜೊತೆಯಲ್ಲಿ ಹೋಗಲು ಒಪ್ಪಿಕೊಂಡಿದ್ದಾಳೆ. ಅವರು ಅವಳನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಆಕೆಯ ಸರ ಕಸಿದುಕೊಂಡಿದ್ದಾರೆ. ನಿನ್ನ ಗಂಡ ನಮ್ಮ ಬಂಧನದಲ್ಲಿದ್ದು, ತಾವು ಹೇಳಿದಂತೆ ಕೇಳಬೇಕೆಂದು ಬೆದರಿಸಿ ಅತ್ಯಚಾರ ಎಸಗಿದ್ದಾರೆ.
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ನಂತರ ಆರೋಪಿಗಳು ಆಕೆಯನ್ನು ದೇವಸ್ಥಾನದ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಮಹಿಳೆ ಹೇಗೋ ಖಮತಾರೈ ಪೋಲಿಸ್ ಸ್ಟೇಷನ್ ತಲುಪುವಲ್ಲಿ ಯಶಸ್ವಿಯಾಗಿದ್ದು, ತನ್ನ ಕಷ್ಟವನ್ನು ಪೊಲೀಸರಿಗೆ ಹೇಳಿದ್ದಾಳೆ. ಮಹಿಳೆಯ ಪತಿ ಕೂಡ ಪೋಲಿಸ್ ಠಾಣೆಯನ್ನು ತಲುಪಿದ್ದಾನೆ. ದಂಪತಿ ಒಂದಾಗಿದ್ದು, ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.