ಬೇಹ್ಯಾನ್ ಮುಟ್ಲು ಎಂಬ 50 ವರ್ಷದ ವ್ಯಕ್ತಿಯು ತನ್ನ ಸ್ನೇಹಿತರೊಂದಿಗೆ ನಗರದ ಅಂಚಿನ ಕಾಡಿನಲ್ಲಿ ‘ಮದ್ಯಪಾನʼ ಪಾರ್ಟಿ ಮಾಡಿದ್ದರು. ಟರ್ಕಿಯ ಇನಿಗಾಲ್ ನಗರದ ನಿವಾಸಿ ಬೇಹ್ಯಾನ್ ಕಂಠಪೂರ್ತಿ ಕುಡಿದು ಸ್ನೇಹಿತರು ಬೇಡ ಎಂದರೂ ಕೂಡ ಕಾಡಿನಲ್ಲಿ ತಿರುಗಾಡಿದ್ದ.
ಮಾರನೇಯ ದಿನ ನಶೆ ಇಳಿದ ಸ್ನೇಹಿತರಿಗೆ ಆಘಾತಕಾರಿ ಸುದ್ದಿ ಕಾದಿತ್ತು. ಬೇಹ್ಯಾನ್ ನಾಪತ್ತೆಯಾಗಿದ್ದ ! ಹೌದು, ಕೂಡಲೇ ಸ್ನೇಹಿತರು ಪೊಲೀಸರಿಗೆ ದೂರು ನೀಡಿ, ಕಾಡಿಗೆ ರಕ್ಷಣಾ ಸಿಬ್ಬಂದಿ ಜತೆಗೆ ಕರೆದೊಯ್ದರು. ಬೇಹ್ಯಾನ್ ನೆರೆಹೊರೆಯವರು, ಸ್ನೇಹಿತರು ಕೂಡ ಪೊಲೀಸರೊಂದಿಗೆ ಶೋಧಕಾರ್ಯಕ್ಕೆ ಸಾಥ್ ನೀಡಿದರು.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮುನ್ನ ಎಚ್ಚರ..! ಅರೆ ಕ್ಷಣದಲ್ಲಿ ಖಾಲಿಯಾಗ್ಬಹುದು ಹಣ
ಕಾಡಿನಲ್ಲಿ ಪ್ರಾಣಿಗಳ ದಾಳಿಗೆ ತುತ್ತಾಗಿರಬಹುದು, ಮದ್ಯದ ನಶೆಯಲ್ಲಿ ಪ್ರಪಾತಕ್ಕೆ ಬಿದ್ದಿರಬಹುದು, ಸುಸ್ತಾಗಿ ಪ್ರಜ್ಞಾಶೂನ್ಯನಾಗಿರಬಹುದು ಎಂದು ಎಲ್ಲರೂ ಆತಂಕದಿಂದ ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಪೊಲೀಸರು ತಮ್ಮ ವಾಹನದ ಮೈಕ್‌ನಲ್ಲಿ ಜೋರಾಗಿ ’ ಬೇಹ್ಯಾನ್, ಎಲ್ಲಿದೀಯಾ?’ ಎಂದು ಕೂಗುತ್ತಿದ್ದರು.
ಪಾಪ, ಅವರಿಗೆ ಏನಾಗಿದೆಯೋ ಎಂಬ ಗಾಬರಿ.
ಆಗ ಪೊಲೀಸರಿಗೆ ಯಾರೋ ಬೆನ್ನು ತಟ್ಟಿದ ಹಾಗಾಗಿದೆ. ಅವರು ಹಿಂದಿರುಗಿ ನೋಡಿದಾಗ 50 ವರ್ಷದ ದೊಡ್ಡ ಮನುಷ್ಯ ನಿಂತಿದ್ದಾನೆ. ಆತ ಕೇಳಿದ, ’ ಯಾಕೆ ಕಿರುಚಿಕೊಂಡು, ನನ್ನ ಹೆಸರು ಹೇಳುತ್ತಿದ್ದೀರಿ?’ ಎಂದು.
ಗಾಬರಿಗೊಂಡ ಪೊಲೀಸರು ಶೋಧಕಾರ್ಯದಲ್ಲಿ ಬೇಹ್ಯಾನ್ ಸ್ನೇಹಿತರನ್ನು ಕರೆಸಿ ತೋರಿಸಿದಾಗ, ಪೊಲೀಸರ ಎದುರಿಗೆ ಹಾಜರಾದ ವ್ಯಕ್ತಿ ಬೇಹ್ಯಾನ್ ಆಗಿದ್ದ. ಆತ ತನ್ನದೇ ಹುಡುಕಾಟದಲ್ಲಿ ಮೆಲ್ಲಗೆ ಕಾಡಿನಲ್ಲಿ ಪೊಲೀಸರಿಗೇ ಜತೆಯಾಗಿದ್ದ ಭೂಪ.
ಸ್ನೇಹಿತರು ಸ್ವಲ್ಪ ಸುಧಾರಿಸಿಕೊಂಡು ಬೇಹ್ಯಾನ್‌ಗೆ ಚೆನ್ನಾಗಿ ಉಗಿದಿದ್ದಾರೆ. ಮನೆಗೆ ಕರೆದೊಯ್ದು , ಇನ್ಯಾವತ್ತೂ ನಿನ್ನ ಜತೆಗೆ ಕುಡಿಯಲ್ಲ ಮಾರಾಯ ಎಂದು ಕೈಮುಗಿದಿದ್ದಾರೆ.