alex Certify ಪೊಲೀಸರು ತಮ್ಮ ಕರ್ತವ್ಯ ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಸುಖಾಸುಮ್ಮನೆ 112 ಗೆ ಕರೆ ಮಾಡಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರು ತಮ್ಮ ಕರ್ತವ್ಯ ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಸುಖಾಸುಮ್ಮನೆ 112 ಗೆ ಕರೆ ಮಾಡಿದ ಭೂಪ…!

ಎಮರ್ಜೆನ್ಸಿ ನಂಬರ್ 112,‌ ಪೋಲಿಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್‌ನಂತಹ ವಿವಿಧ ಸೇವೆಗಳಿಗೆ ಒಂದೇ ತುರ್ತು ಸಹಾಯವಾಣಿ ಸಂಖ್ಯೆಯಾಗಿದೆ. ಆದರೂ, 112ಕ್ಕೆ ಬರುವ ಕರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ಮಿಸ್‌ ಡಯಲ್‌ಗಳು, ಪ್ರಾಂಕ್ ಕರೆಗಳು, ಇತರ ರೀತಿಯ ನಿಂದನಾ ಕರೆಗಳು ಅಥವಾ ದುರುಪಯೋಗ ಕರೆಗಳಾಗಿರುತ್ತವೆ.

ಹರಿಯಾಣದ ಪಂಚಕುಲದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ವಿಲಕ್ಷಣ ಕಾರಣಕ್ಕಾಗಿ ಮಧ್ಯರಾತ್ರಿ ಪೊಲೀಸ್ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿದ್ದಾನೆ.

ಮದ್ಯ ಕುಡಿದು ನಶೆಯ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸರು ಬರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು 112ಕ್ಕೆ ಕರೆ ಮಾಡಿದ್ದಾನೆ. ವೃತ್ತಿಯಲ್ಲಿ ದಿನಗೂಲಿ ನೌಕರನಾಗಿರುವ 42 ವರ್ಷದ ನರೇಶ್ ಕುಮಾರ್ ಕಳೆದ ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಹಾಯ ಕೇಳಿದ್ದಾರೆ. 15 ನಿಮಿಷಗಳಲ್ಲಿ, ಪೊಲೀಸರು ನಿಜವಾಗಿಯೂ ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ.

ಕ್ಷಮೆ ಕೇಳುವಂತಹ ಹೇಳಿಕೆ ನೀಡಿಲ್ಲ: ಡಿಕೆಶಿಗೆ ಜಮೀರ್ ಟಾಂಗ್

ಪೊಲೀಸರು ತುರ್ತು ಕರೆ ಮಾಡಿದ್ಯಾಕೆ ಎಂದು ಕಾರಣ ಕೇಳಿದಾಗ, ಆತ ಮೋರ್ನಿಯಿಂದ ಬರುವಾಗ ಸಂಜೆ ಬಸ್ ಮಿಸ್ ಆಯಿತು. ನಂತರ ನಡೆದುಕೊಂಡೆ ಮನೆ ಕಡೆ ಹೋಗಲು ನಿರ್ಧರಿಸಿದೆ. ಈ ನಡುವೆ ದಾರಿಯಲ್ಲಿ ಬಿಯರ್ ಸೇವಿಸಿ, ಪೊಲೀಸರು ಬೇಗ ಬರುತ್ತಾರೋ ಅಥವಾ ತಡವಾಗಿ ಬರುತ್ತಾರೋ ಎಂದು ಪರೀಕ್ಷಿಸಲು ಎಮರ್ಜನ್ಸಿ ಸಂಖ್ಯೆಗೆ ಕರೆ ಮಾಡಿದೆ ಎಂದು ಉತ್ತರಿಸಿದ್ದಾನೆ.

ಆತ ನೀಡಿದ ಉತ್ತರವು ಮನವರಿಕೆಯಾಗದ ನಂತರ, ಪೊಲೀಸ್ ಅಧಿಕಾರಿಗಳು ನಿಮಗೆ ಏನಾದರೂ ತೊಂದರೆ ಇದೆಯಾ ಎಂದು ಹಲವಾರು ಬಾರಿ ಕೇಳಿದ್ದಾರೆ. ಆದರೂ ಆತ ಅದೇ ಉತ್ತರ ನೀಡಿ, ನನಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವಿಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರನ್ನು ರಂಜಿಸುತ್ತಿದೆ. ಘಟನೆಗೆ ಹಲವರು ವಿಭಿನ್ನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...