ವ್ಯಕ್ತಿಯೊಬ್ಬ ತನ್ನ ವಿಚಿತ್ರ ಬೇಡಿಕೆ ಈಡೇರಿಸಿಕೊಳ್ಳಲು ಮೊಬೈಲ್ ಟವರ್ ಏರಿದ ಪ್ರಸಂಗ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ.
ಗಣಪತ್ ಬಾಕಲ್ ಎಂಬಾತ 100 ಅಡಿ ಎತ್ತರದ ಮೊಬೈಲ್ ಟವರ್ ಮೇಲೆ ಹತ್ತಿದ್ದು, ತನ್ನ ಹೆಂಡತಿ ತನ್ನ ತವರು ಮನೆಯಿಂದ ಮನೆಗೆ ಮರಳಬೇಕೆಂಬುದು ಆತನ ಆಗ್ರಹವಾಗಿತ್ತು.
ಬದ್ನಾಪುರ ತಹಸಿಲ್‌ನ ದಬಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೌಟುಂಬಿಕ ಕಲಹವನ್ನು ಪರಿಹರಿಸಲು ಶ್ರಮಿಸುವುದಾಗಿ ಗ್ರಾಮಸ್ಥರು, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಭರವಸೆ ನೀಡಿದ ನಂತರವೇ ಗಣಪತ್ ಬಾಕಲ್ ಕೆಳಗೆ ಬಂದಿದ್ದಾನೆ.
ಆತ ಸುಮಾರು ನಾಲ್ಕು ತಾಸು ಸತಾಯಿಸಿದ್ದು, ಕೆಳಗಿಳಿದ ಬಳಿಕ ಪೊಲೀಸರು ಆತನನ್ನು ಬಂಧಿಸಿ ಬಿಡುಗಡೆ ಮಾಡಿದರು.